ರಾವಸಾಹೇಬ ಬದುಕು ಸ್ಫೂರ್ತಿದಾಯಕ

4BRG1
Published on

ಬೋರಗಾಂವ: ಆಚಾರ್ಯ ಶಾಂತಿಸಾಗರ ಮಹಾರಾಜರು ಮುನಿಗಳ ಸಂಪ್ರದಾಯ ಹಾಗೂ ಧರ್ಮದ ಸಂಪ್ರದಾಯ ಎತ್ತಿಹಿಡಿದ ರಾವಸಾಹೇಬ ಪಾಟೀಲ ಕೆಲಸ ಸ್ಫೂರ್ತಿದಾಯಕವಾಗಿದೆ ಎಂದು ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಸ್ತವನಿಧಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಥಮಾಚಾರ್ಯ 108 ಶಾಂತಿಸಾಗರ ಮಹಾರಾಜರ ಸ್ಮಾರಕದ ಅನಾವರಣ ಮತ್ತು ದಿವಂಗತ ರಾವಸಾಹೇಬ ಪಾಟೀಲ ಸಭಾಂಗಣದ ನಾಮಕರಣ ಸಮಾರಂಭದಲ್ಲಿ ಮಾತನಾಡಿದರು. ಜೈನ ಸಮುದಾಯ ಒಗ್ಗೂಡಿಸಿದ ರಾವಸಾಹೇಬ ಪಾಟೀಲರು ಆದರ್ಶವಾಗಿದ್ದು, ಅವರಂತೆ ಒಳ್ಳೆಯ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಹಕಾರ ರತ್ನ ಉತ್ತಮ ಪಾಟೀಲ ಮಾತನಾಡಿ, ರಾವಸಾಹೇಬ ಪಾಟೀಲ ಅವರು 3.5 ಕೋಟಿ ರೂ. ವೆಚ್ಚದಲ್ಲಿ ಸಭಾಂಗಣ ನಿರ್ಮಿಸಿ ಜನರಿಗೆ ಅನುಕೂಲ ಮಾಡಿದ್ದಾರೆ. ದಕ್ಷಿಣ ಭಾರತ ಜೈನ ಸಭೆಗಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡಿದ್ದು ಮಾದರಿ ಕಾರ್ಯವಾಗಿದೆ ಎಂದು ಪ್ರಶಂಶಿಸಿದರು.

ಕೊಲ್ಲಾಪುರದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ಶಾಂತಿಸಾಗರ ಮಹಾರಾಜರ ಆಚಾರ ವಿಚಾರಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಿವಂಗತ ರಾವಸಾಹೇಬ ಪಾಟೀಲರು ಅನೇಕರಿಗೆ ಬದುಕಲು ಶಕ್ತಿ ತುಂಬಿದ್ದಾರೆ ಎಂದರು. ಮಾಜಿ ಸಚಿವ ವೀರಕುಮಾರ ಪಾಟೀಲ ಮಾತನಾಡಿ, ಭವಿಷ್ಯದ ರಾಜಕೀಯದಲ್ಲಿ ನಾನು, ಅಭಿನಂದನ ಪಾಟೀಲ ಮತ್ತು ಉತ್ತಮ ಪಾಟೀಲ ಒಟ್ಟಿಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿ ದಕ್ಷಿಣ ಭಾರತ ಜೈನಸಭಾ ಅಧ್ಯಕ್ಷ ಬಾಲಚಂದ್ರ ಪಾಟೀಲ ಮಾತನಾಡಿ, ದಕ್ಷಿಣ ಭಾರತ ಜೈನ ಸಭಾ ಕಾರ್ಯಕಾರಿ ಸಮಿತಿಯಲ್ಲಿ ದಾದಾ ಹಲವರಿಗೆ ಅವಕಾಶ ನೀಡಿದರು. ಅವರ ಆಲೋಚನೆಗಳ ಪ್ರಕಾರ ಸಭೆ ನಡೆಯುತ್ತಿದ್ದು, ಪ್ರಗತಿಯತ್ತ ಕೊಂಡೊಯ್ಯಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿದರು. ದಕ್ಷಿಣ ಭಾರತ ಜೈನಸಭಾ ಚೇರ್ಮನ್ ರಾವಸಾಹೇಬ ಪಾಟೀಲ, ಮೀನಾಕ್ಷಿ ರಾವಸಾಹೇಬ ಪಾಟೀಲ, ರಾಜೇಂದ್ರ ಪಾಟೀಲ, ಅನಿಲ ಪಾಟೀಲ, ದಕ್ಷಿಣ ಭಾರತ ಜೈನಸಭೆಯ ಕಾರ್ಯದರ್ಶಿ ಡಾ.ಅಜಿತ್ ಪಾಟೀಲ, ಅಶೋಕ ಜೈನ, ಸಿದ್ದಣ್ಣ ನಂಗನೂರ, ಡಾ.ರಾವಸಾಹೇಬ ಕುನ್ನೂರೆ, ರಾಜು ಪಾಟೀಲ, ತಾತ್ಯಾಸಾಹೇಬ ಪಾಟೀಲ, ಆರ್.ಬಿ. ಖೋತ, ಬಾಳಾಸಾಬ ಮಗದುಮ, ಜಯಕುಮಾರ ಖೋತ, ಧನಶ್ರೀ ಪಾಟೀಲ, ವಿನಯಶ್ರೀ ಪಾಟೀಲ, ಅನಿತಾ ಪಾಟೀಲ, ಧನ್ಯಕುಮಾರ ಗುಂಡೆ, ಸುಂದರ ಪಾಟೀಲ, ಸುದರ್ಶನ ಖೋತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net