ರಾವಂದೂರಿಗೆ ಶೇ. 70 ಫಲಿತಾಂಶ  ಕರ್ನಾಟಕ ಪಬ್ಲಿಕ್ ಶಾಲೆ ಕಾಲೇಜು ವಿಭಾಗ ಸಾಧನೆ

1 RAVANDUR
Published on

ರಾವಂದೂರು: ಪಿರಿಯಾಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆ ಕಾಲೇಜು ವಿಭಾಗಕ್ಕೆ ಪಿಯು ಪರೀಕ್ಷೆಯಲ್ಲಿ ಶೇ. 70 ಫಲಿತಾಂಶ ದೊರಕಿದೆ.

ಪಿರಿಯಾಪಟ್ಟಣ ತಾಲೂಕು ಕರ್ನಾಟಕ ಪಬ್ಲಿಕ್ ಶಾಲೆಯ ಕಾಲೇಜು ವಿಭಾಗದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇಕಡ 70ರಷ್ಟು ಫಲಿತಾಂಶ ಲಭಿಸಿದ್ದು ಇದಕ್ಕೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಪರಿಶ್ರಮ ಬಹಳ ಮುಖ್ಯವಾಗಿದೆ

ಕಲಾ ವಿಭಾಗದಲ್ಲಿ ಶೇ. 64, ವಾಣಿಜ್ಯ ವಿಭಾಗದಲ್ಲಿ ಶೇ.84 ವಿಜ್ಞಾನ ವಿಭಾಗದಲ್ಲಿ ಶೇ. 64 ಫಲಿತಾಂಶ ಪ್ರಾಪ್ತವಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕಲಾವಿಭಾಗದಲ್ಲಿ ಕೆ. ಆರ್. ಬಿಂದು 581 ವರಲಕ್ಷ್ಮೀ 573, ಕೆ.ಯು. ಜ್ಞಾನವಿ500 ಅಂಕ ಪಡೆದು ಕಾಲೇಜಿಗೆ ಟಾಪರ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪಲ್ಲವಿ 547, ಸಿಂಚನ 534, ವಿಜ್ಞಾನ ವಿಭಾಗದಲ್ಲಿ ಡಿ. ಜಿ. ಐಶ್ವರ್ಯಾ 483, ವೃಷಭ 460 ಅಂಕ ಪಡೆದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಸುಭಾಷ್, ಉಪನ್ಯಾಸಕರಾದ ಲಕ್ಷ್ಮಿಕಾಂತ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿಶ್ವನಾಥ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net