ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಫಲಿತಾಂಶ ಅತಂತ್ರ

Rattihalli Town Panchayat results
Published on

ರಟ್ಟಿಹಳ್ಳಿ: ಸ್ಥಳೀಯ ಪಟ್ಟಣ ಪಂಚಾಯಿತಿಯ ಪ್ರಥಮ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಇರುವುದರಿಂದ ಅತಂತ್ರವಾಗಿದೆ.

ಒಟ್ಟು 15 ಸ್ಥಾನಗಳಲ್ಲಿ ಕಾಂಗ್ರೆಸ್​ನ 7, ಬಿಜೆಪಿ 6 ಹಾಗೂ ಪಕ್ಷೇತರರು 2ರಲ್ಲಿ ಗೆಲುವು ದಾಖಲಿಸಿದ್ದಾರೆ. ಪಪಂ ಅಧಿಕಾರ ಗದ್ದುಗೆ ಹಿಡಿಯಲು 8 ಸದಸ್ಯರ ಬೆಂಬಲ ಬೇಕು. ಆದರೆ, ಕಾಂಗ್ರೆಸ್​ಗೆ ಒಂದು, ಬಿಜೆಪಿಗೆ ಇಬ್ಬರು ಸದಸ್ಯರ ಬೆಂಬಲ ಬೇಕು. ಹೀಗಾಗಿ ಇಬ್ಬರು ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ.

ವಾರ್ಡ್​ವಾರು ಫಲಿತಾಂಶ-1ನೇ ವಾರ್ಡ್: ಬಿಜೆಪಿಯ ರವಿ ಹದಡೇರ 397 ಮತ ಪಡೆದು ಗೆಲುವು. ಪ್ರತಿಸ್ಪರ್ಧಿ ಕಾಂಗ್ರೆಸ್​ನ ರಾಮಣ್ಣ ವಾಲ್ಮೀಕಿ 181 ಮತ ಪಡೆದು ಸೋಲು.

2ನೇ ವಾರ್ಡ್: ಕಾಂಗ್ರೆಸ್​ನ ಮಲ್ಲಮ್ಮ ಕಟೇಕಾರ 387 ಮತ ಪಡೆದು ಗೆಲುವು, ಬಿಜೆಪಿಯ ಬಸಮ್ಮ ಸಾವಕ್ಕನವರ 270 ಮತ ಪಡೆದು ಪರಾಭವ.

3ನೇ ವಾರ್ಡ್: ಕಾಂಗ್ರೆಸ್​ನ ವೀರನಗೌಡ ನಾಗನಗೌಡ ಪ್ಯಾಟಿಗೌಡ್ರು 336 ಮತ ಪಡೆದು ಜಯಭೇರಿ, ಬಿಜೆಪಿಯ ಗಿರೀಶ ವೀರಪ್ಪ ಅಂಗರಗಟ್ಟಿ 244 ಮತ ಪಡೆದು ಸೋಲು.

4ನೇ ವಾರ್ಡ್: ಕಾಂಗ್ರೆಸ್​ನ ರವೀಂದ್ರ ಮುದಿಯಪ್ಪನವರ 342 ಮತ ಪಡೆದು ಜಯಶೀಲ, ಬಿಜೆಪಿಯ ರಾಘವೇಂದ್ರ ಹರವಿಶೆಟ್ಟರ್ 255 ಮತ ಪಡೆದು ಪರಾಭವ.

5ನೇ ವಾರ್ಡ್: ಬಿಜೆಪಿಯ ಬಸವರಾಜ ಆಡಿನವರ 243 ಮತ ಪಡೆದು ಗೆಲುವು. ಕಾಂಗ್ರೆಸ್​ನ ಕಪಿಲದೇವ ಪೂಜಾರ 239 ಮತ ಪಡೆದು ಪರಾಜಿತಗೊಂಡಿದ್ದಾರೆ.

6ನೇ ವಾರ್ಡ್: ಕಾಂಗ್ರೆಸ್​ನ ಅರಶದಬಾನು ಗೊಡಿಹಾಳ 359 ಮತ ಪಡೆದು ಜಯಭೇರಿ ಬಾರಿಸಿದರೆ, ಪಕ್ಷೇತರ ಅಭ್ಯರ್ಥಿ ಹಸಮತಬಾನು ಮಳಗಿ 256 ಮತ ಪಡೆದು ಸೋಲನನುಭವಿಸಿದರು.

7ನೇ ವಾರ್ಡ್: ಕಾಂಗ್ರೆಸ್​ನ ಪರಮೇಶಗೌಡ ಬಸನಗೌಡ್ರ 297ಮತ ಪಡೆದು ಗೆದ್ದರೆ, ಬಿಜೆಪಿ ರಾಜನಗೌಡ ಪಾಟೀಲ 205 ಮತ ಪಡೆದು ಸೋತರು.

8ನೇ ವಾರ್ಡ್: ಬಿಜೆಪಿಯ ಲಕ್ಷ್ಮೀ ರಮೇಶ ಚಿಕ್ಕಮೊರಬ 235 ಮತ ಪಡೆದು ಜಯಶೀಲರಾದರೆ, ಕಾಂಗ್ರೆಸ್​ನ ರೇಖಾ ಮಾಲತೇಶ ಗೊರವರ 148 ಮತ ಪಡೆದು ಸೋಲುಂಡರು.

9ನೇ ವಾರ್ಡ್: ಪಕ್ಷೇತರ ಅಭ್ಯರ್ಥಿ ಶಿವಕುಮಾರ ಉಪ್ಪಾರ 193 ಮತ ಪಡೆದು ಗೆಲುವು ದಾಖಲಿಸಿದರೆ, ಬಿಜೆಪಿಯ ಸುಶೀಲ ನಾಡಗೇರ 152 ಮತಗಳಿಂದ ಪರಾಜಿತಗೊಂಡರು.

10ನೇ ವಾರ್ಡ್: ಕಾಂಗ್ರೆಸ್​ನ ಸರ್ಫರಾಜ ಮಾಸೂರು 275 ಮತ ಪಡೆದು ಗೆಲುವು ತಮ್ಮದಾಗಿಸಿಕೊಂಡರೆ ಪಕ್ಷೇತರ ಅಭ್ಯರ್ಥಿ ರಿಯಾಜ ಅಹ್ಮದ್ ತಡಕನಹಳ್ಳಿ 185 ಮತ ಪಡೆದು ಸೋಲಿನ ಕಹಿ ಅನುಭವಿಸಿದರು.

11ನೇ ವಾರ್ಡ್: ಕಾಂಗ್ರೆಸ್​ನ ಮಖಬೂಲ್​ಸಾಬ್ ಮುಲ್ಲಾ 395 ಮತ ಪಡೆದು ಗೆದ್ದರೆ, ಪಕ್ಷೇತರ ಅಭ್ಯರ್ಥಿ ಖಾಜಿ ಮಹ್ಮದ್ ಜಾಫರ ರೆಹಮಾನಸಾಬ್ 145 ಮತ ಪಡೆದು ಸೋಲುಂಡರು.

12ನೇ ವಾರ್ಡ್: ಬಿಜೆಪಿಯ ಮಂಜುಳಾ ರಾಮಚಂದ್ರಪ್ಪ ಅಗಡಿ 206 ಮತ ಪಡೆದು ಗೆದ್ದರೆ, ಕಾಂಗ್ರೆಸ್​ನ ಗೀತಾ ಎಂ.ಪಿ. 144 ಮತ ಪಡೆದು ಸೋಲುಣ್ಣುವಂತಾಯಿತು.

13ನೇ ವಾರ್ಡ್: ಬಿಜೆಪಿಯ ಶ್ರೀದೇವಿ ಶ್ರೀನಿವಾಸ ಭೈರಪ್ಪನವರ 469 ಮತ ಪಡೆದು ಜಯಭೇರಿ ಬಾರಿಸಿದರೆ ಕಾಂಗ್ರೆಸ್​ನ ಪವಿತ್ರಾ ನಾಗರಾಜ ಜಾಧವ 158 ಮತ ಪಡೆದು ಪರಾಜಯಗೊಂಡರು.

14ನೇ ವಾರ್ಡ್: ಬಿಜೆಪಿಯ ಬಸವರಾಜ ನರಸಪ್ಪ ಕಟ್ಟಿಮನಿ 439 ಮತ ಪಡೆದು ಜಯಶೀಲರಾದರೆ, ಕಾಂಗ್ರೆಸ್​ನ ಜಗದೀಶ್ವರ ಬಸಪ್ಪ ದೊಡ್ಡಮನಿ 218 ಮತ ಪಡೆದು ಪರಾಜಿತಗೊಂಡಿದ್ದಾರೆ.

15ನೇ ವಾರ್ಡ್: ಪಕ್ಷೇತರ ಅಭ್ಯರ್ಥಿ ಲಲಿತಾ ಚೆನ್ನಗೌಡ್ರ 146 ಮತ ಪಡೆದು ಗೆಲುವು ತಮ್ಮದಾಗಿಸಿಕೊಂಡರೆ, ಕಾಂಗ್ರೆಸ್​ನ ಅಮೃತಾ ಯತ್ನಹಳ್ಳಿ 135 ಮತ ಪಡೆದು ಸೋಲುಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net