ಶೌಚಕ್ಕೆ ತೆರಳಿದ್ದ ಮಗುವಿನ ಮೃತದೇಹ ಪತ್ತೆ

1 smg sanju
Published on

ಶಿವಮೊಗ್ಗ: ಸವಳಂಗ ಸಮೀಪದ ರಟ್ಟಿಹಳ್ಳಿಯಲ್ಲಿ ಬಯಲು ಶೌಚಕ್ಕೆ ತೆರಳಿದ್ದ ಮಗುವಿನ ಮೃತದೇಹ ಮನೆಯಿಂದ ಅರ್ಧ ಕಿಮೀ ದೂರದಲ್ಲಿ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

ರಟ್ಟಿಹಳ್ಳಿಯ ಬಸವರಾಜ್-ಮಂಜುಳಾ ದಂಪತಿ ಪುತ್ರ, ನಾಲ್ಕು ವರ್ಷದ ಸಂಜು ಮೃತ ಬಾಲಕ. ಆ.30ರಂದು ಬೆಳಗ್ಗೆ ಮನೆ ಸಮೀಪವೇ ಶೌಚಕ್ಕೆಂದು ತೆರಳಿದ್ದ. ಸ್ವಲ್ಪ ಹೊತ್ತಿನ ಬಳಿಕ ಬಾಲಕ ಅಜ್ಜ ಹೋಗಿ ಕರೆದರೂ ಬಂದಿರಲಿಲ್ಲ. ಆನಂತರ ಇದ್ದಂಕ್ಕಿದ್ದಂತೆ ನಾಪತ್ತೆಯಾಗಿದ್ದ. ಸಂಜೆವರೆಗೆ ಹುಡುಕಾಟ ನಡೆಸಿದ ಪಾಲಕರು ನಂತರ ಕುಂಸಿ ಠಾಣೆಗೆ ದೂರು ನೀಡಿದ್ದರು. ಬುಧವಾರ ಬೆಳಗ್ಗೆ ಮನೆಯಿಂದ ಅರ್ಧ ಕಿಮೀ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಶೌಚಕ್ಕೆ ತೆರಳಿದ್ದ ಜಾಗದ ಹಿಂಬದಿ ಸ್ವಲ್ಪ ದೂರದ ಕೆರೆಯಲ್ಲಿ ಬಾಲಕನ ದೇಹ ದೊರೆತಿದ್ದು ಪಾಲಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಕುಂಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net