ರಟ್ಟಿಹಳ್ಳಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ

Rattihalli tehsildar office be sieged
Published on

ರಟ್ಟಿಹಳ್ಳಿ: ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬ ಸಮಿತಿ ವತಿಯಿಂದ ಜರುಗಿದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ತಾಲೂಕು ಆಡಳಿತ ಸಂಪೂರ್ಣವಾಗಿ ಶಿಷ್ಟಾಚಾರ ಉಲ್ಲಂಘಿಸಿ, ಎರಡು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಅಗೌರವ ತೋರಲಾಗಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು, ಪಾಲಕರು ಪಟ್ಟಣದಲ್ಲಿ ತಹಸೀಲ್ದಾರ್ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದರು.

ಗ್ರಾಪಂ ಮಾಜಿ ಅಧ್ಯಕ್ಷ ಶಂಕರಗೌಡ ಚೆನ್ನಗೌಡ್ರ ಮಾತನಾಡಿ, ಪ್ರತಿವರ್ಷ ರಾಷ್ಟ್ರೀಯ ಹಬ್ಬಗಳನ್ನು ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲಾ ಮೈದಾನದಲ್ಲಿ ಆಚರಿಸುವ ವೇಳೆ ಎಸ್‌ಡಿಎಂಸಿ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರನ್ನು ಆಹ್ವಾನಿಸಲಾಗುತ್ತಿತ್ತು. ಈ ಬಾರಿ ತಾಲೂಕು ಆಡಳಿತ ಶಿಷ್ಟಾಚಾರ ಉಲ್ಲಂಘಿಸಿದೆ ಎಂದು ಆರೋಪಿಸಿದರು.

ಮುಂಬರುವ ಯಾವುದೇ ರಾಷ್ಟ್ರೀಯ ಹಬ್ಬಗಳ ಆಚರಣೆ ವೇಳೆ ತಾಲೂಕು ಆಡಳಿತವು ಶಿಷ್ಟಾಚಾರದಂತೆ ಅವಕಾಶ ನೀಡಬೇಕು. ಪುನಃ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು.

ತಹಸೀಲ್ದಾರ್ ಕೆ. ಗುರುಬಸವರಾಜ, ಸಿಪಿಐ ಬಸವರಾಜ ಬಿ.ಎಸ್. ಮನವಿ ಸ್ವೀಕರಿಸಿ, ತಾಲೂಕು ಆಡಳಿತದ ಸಿಬ್ಬಂದಿಯಿಂದ ಒಂದು ಪ್ರತ್ಯೇಕ ಸಭೆ ಆಯೋಜಿಸಿ, ಮುಂದಿನ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸಲು ಸೂಚಿಸುತ್ತೇವೆ ಎಂದು ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ ಹರವಿಶೆಟ್ಟರ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಪೂಜಾರ, ಗ್ರಾಪಂ ಮಾಜಿ ಸದಸ್ಯ ದೇವರಾಜ ನಾಗಣ್ಣನವರ, ಹನುಮಂತಪ್ಪ ಗಾಜೇರ, ರವಿ ಹದಡೇರ, ಸಿದ್ದು ಹಲಗೇರಿ, ಮಂಜು ತಳವಾರ, ಪ್ರಕಾಶ ಹರಳಹಳ್ಳಿ, ಆನಂದ ಪುಟ್ಟಣ್ಣನವರ, ಬಸವರಾಜ ದ್ಯಾವಕ್ಕಳವರ, ರಮೇಶ ಸೊರಟೂರ, ನಾಗರಾಜ ನಡುವಿನಮನಿ, ಕುಮಾರ ದ್ಯಾವಣ್ಣನವರ, ಬಸವರಾಜ ಗೊಬ್ಬುರ, ಆಕಾಶ ಪಾಟೀಲ, ನವೀನ ಮಾದರ ಶಿವರಾಜ ಪೂಜಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net