ರಟ್ಟಿಹಳ್ಳಿ ತಾಲೂಕು ವಕೀಲರ ಸಂಘ ಅಸ್ತಿತ್ವಕ್ಕೆ

Rattihalli Taluk Bar Association for existence
Published on

ರಟ್ಟಿಹಳ್ಳಿ: ತಾಲೂಕು ನೂತನ ವಕೀಲರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಬಿ.ಎಚ್. ಬನ್ನಿಕೋಡ ಮತ್ತು ಉಪಾಧ್ಯಕ್ಷರಾಗಿ ಎಸ್.ವಿ. ತೊಗರ್ಸಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಾರುತಿ ಜೋಕನಾಳ ಅವರನ್ನು ಸರ್ವಾನುಮತದಿಂದ ಸೋಮವಾರ ಆಯ್ಕೆ ಮಾಡಲಾಯಿತು.

ಪಟ್ಟಣದ ಪ್ರಿಯದರ್ಶಿನಿ ಕಾಲೇಜಿನ ಸಮುದಾಯ ಭವನದಲ್ಲಿ ಹಿರೇಕೆರೂರ, ರಟ್ಟಿಹಳ್ಳಿ ಮತ್ತು ರಾಣೆಬೆನ್ನೂರ ತಾಲೂಕು ವಕೀಲರ ಸಂಘದ ಸದಸ್ಯರ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ನೂತನ ರಟ್ಟಿಹಳ್ಳಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಹಕಾರ್ಯದರ್ಶಿಯಾಗಿ ಎಸ್.ಎಸ್. ಪಾಟೀಲ ಮತ್ತು ಲೆಕ್ಕಪರಿಶೋಧಕರಾಗಿ ಕುಮಾರ ಕೋಟಿಹಾಳ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ಬಿ.ಸಿ. ಪಾಟೀಲ, ಪಿ.ಬಿ. ಗುಬ್ಬಿ, ವಿಜಯಕುಮಾರ ಮಡಿವಾಳರ, ಸುರೇಶ ಬೆಣ್ಣಿ, ವಿ.ಆರ್. ದ್ರೌಪಕ್ಕಳವರ, ಸುರೇಶ ದ್ಯಾವಕ್ಕಳವರ, ಪ್ರಕಾಶ ರ್ಬಾ, ಅಬ್ದುಲರೆಹಮಾನ್ ಹೊನ್ನಾಳಿ, ಚಂದನ ಕಬ್ಬಿಣಕಂತಿಮಠ, ಸಂತೋಷ ಪಾಟೀಲ, ಫಕೀರೇಶ ತುಮ್ಮಿನಕಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.

ರಾಣೆಬೆನ್ನೂರ ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡೀಕಟ್ಟಿ, ಇ.ಸಿ. ಮುದಿಗೌಡರ, ಹಿರೇಕೆರೂರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಬಿ. ಬಾಳೇಕಾಯಿ, ಬಿ.ಎಂ. ಹೊಳೆಯಪ್ಪನವರ, ಎಸ್.ಬಿ. ತಿಪ್ಪಣ್ಣನವರ, ಯು.ಬಿ. ಜೋಗಿಹಳ್ಳಿ, ಐ.ಬಿ. ಗುಬ್ಬೇರ ವಕೀಲರು ಉಪಸ್ಥಿತರಿದ್ದರು.

ರಟ್ಟಿಹಳ್ಳಿ ತಾಲೂಕಿನ ಹಿರಿಯ ವಕೀಲ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವರನ್ನು ನೂತನ ರಟ್ಟಿಹಳ್ಳಿ ತಾಲೂಕಿನ ವಕೀಲರ ಸಂಘದ ಸಂಸ್ಥಾಪಕ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಹಿರಿಯ ವಕೀಲರ ಮಾರ್ಗದರ್ಶನ ಮತ್ತು ಅನುಭವ ಸಂಘದ ಎಲ್ಲ ಸದಸ್ಯರಿಗೆ ಅತ್ಯಂತ ಅವಶ್ಯವಾಗಿರುತ್ತದೆ. ಪಟ್ಟಣದಲ್ಲಿರುವ ತೋಟಗಾರಿಕೆ ಇಲಾಖೆಯ ಕಟ್ಟಡ ನವೀಕರಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ನ್ಯಾಯಾಲಯ ಪ್ರಾರಂಭಿಸಲಾಗುತ್ತದೆ. | ಯು.ಬಿ. ಬಣಕಾರ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net