ಮೇವು ತರಲು ಹೋದ ರೈತ ಹಾವು ಕಚ್ಚಿ ಸಾವು

IMAGE_1667644617
Published on

ರಟ್ಟಿಹಳ್ಳಿ: ಹಾವು ಕಡಿದು ರೈತನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಭರಮರಡ್ಡಿ ಚಂದ್ರಶೇಖರಪ್ಪ ಹಿರೇತಿಮ್ಮಣ್ಣನವರ (53) ಮೃತ ರೈತ.
ಇವರು ತಮ್ಮ ಕಣದಲ್ಲಿ ಆಕಳಿಗೆ ಮೇವು ತರುವ ಸಲುವಾಗಿ ಹೋದಾಗ ಹಾವು ಕಚ್ಚಿತ್ತು. ಕೂಡಲೇ ಅವರನ್ನು ರಟ್ಟಿಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net