ರಟ್ಟಿಹಳ್ಳಿಯಲ್ಲಿ ಬೃಹತ್ ಶೋಭಾಯಾತ್ರೆ ಸೆ. 19ರಂದು

17-RTL-1 SHOBHAYTRE
Published on

ರಟ್ಟಿಹಳ್ಳಿ: ಪಟ್ಟಣದ ರಾಷ್ಟ್ರವೀರ ಭಗತ್​ಸಿಂಗ್ ಗೆಳೆಯರ ಬಳಗ ಮತ್ತು ವಿಶ್ವ ಹಿಂದು ಪರಿಷತ್ ಬಜರಂಗದಳದಿಂದ ಪ್ರತಿಷ್ಠಾಪಿಸಿರುವ 25ನೇ ವರ್ಷದ ಗಣೇಶೋತ್ಸವದ ಗಣೇಶನ ಮೂರ್ತಿಯನ್ನು ಸೆ. 19ರಂದು ಬೃಹತ್ ಶೋಭಾಯಾತ್ರೆ ಮೂಲಕ ವಿಸರ್ಜನೆ ಮಾಡಲಾಗುತ್ತಿದೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಆನಂದ ಪುಟ್ಟಣ್ಣವರ ಹೇಳಿದರು.

ಸ್ಥಳೀಯ ಪ್ರವಾಸಿಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಅಂದು ಬೆಳಗ್ಗೆ 8 ಗಂಟೆಗೆ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ, ಸಂಜೆ 5ಕ್ಕೆ ಹುಬ್ಬಳ್ಳಿಯ ಡಿ.ಜೆ. ಜಾನಪದ, ಹಾಗೂ ಸಾಂಸ್ಕೃತಿಕ ತಂಡಗಳ ಸಂಗೀತ ಕಾರ್ಯಕ್ರಮದೊಂದಿಗೆ ಗಣೇಶನ ವಿಸರ್ಜನೆ ಮಾಡಲಾಗುವುದು ಎಂದರು.

ವಿಶ್ವ ಹಿಂದು ಪರಿಷತ್ ಪ್ರಮುಖ ಮೃತ್ಯುಂಜಯ ಬೆಣ್ಣಿ ಮಾತನಾಡಿ, ಶೋಭಾಯಾತ್ರೆಯಲ್ಲಿ ಜಿಲ್ಲೆಯ ಸಮಸ್ತ ವಿಶ್ವ ಹಿಂದು ಪರಿಷತ್, ಬಜರಂಗದಳ ಸಂಘಟನೆಯ ಎಲ್ಲ ಕಾರ್ಯಕರ್ತರು, ಹಿಂದುಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಬೇಕು ಎಂದರು.

ಶಂಕ್ರಗೌಡ ಚೆನ್ನಗೌಡ್ರ, ದೇವರಾಜ ನಾಗಣ್ಣನವರ, ಹನುಮಂತಪ್ಪ ಗಾಜೇರ, ವೀರನಗೌಡ ಯಡಚಿ, ವೀರನಗೌಡ ಮಕರಿ, ಆಕಾಶಗೌಡ ಪಾಟೀಲ, ಸಂತೋಷ ಕಾಪ್ಸೇಕಾರ, ವಿಕಾಸ ಗಿರಿಜಪ್ಪನವರ, ಶಬರೀಶ ಕಾಯಕದ, ವಿಕಾಸ ಕರೇಗೌಡರ, ಮಂಜು ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net