ಶಿರಗಂಬಿ ಮಾರುತಿ ರಥೋತ್ಸವ

26-rtl jatre
Published on

ರಟ್ಟಿಹಳ್ಳಿ: ತಾಲೂಕಿನ ಶಿರಗಂಬಿ ಗ್ರಾಮದಲ್ಲಿ ಇತ್ತೀಚೆಗೆ ಶ್ರೀ ಮಾರುತಿ ದೇವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ತೆಂಗಿನ ಎಳನೀರು ಗೊನೆ, ಬಾಳೆಯ ಗೊನೆ, ಅಡಕೆ ಹಿಂಗಾರುಗಳಿಂದ ಅಲಂಕೃತಗೊಂಡ ರಥಕ್ಕೆ ಭಕ್ತರು ಬಾಳೆಣ್ಣು, ಉತ್ತತ್ತಿಗಳುನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡ ರಥೋತ್ಸವ ಗ್ರಾಮದ ರಥ ಬೀದಿಯಲ್ಲಿ ಸಾಗಿ ಪುನಃ ಅದೇ ಮಾರ್ಗವಾಗಿ ಬಂದು ಸಂಪನ್ನಗೊಂಡಿತು. ರಥೋತ್ಸವದ ವೇಳೆ ಪುರವಂತರು ಶ್ರೀ ಮಾರುತಿ ದೇವರ ಒಡಪುಗಳನ್ನು ಹೇಳುವ ಮೂಲಕ ಭಕ್ತರ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net