ಮಿಡಿಸೌತೆ ಮಾರಾಟ ಮಾಡಿದ್ದ 20 ಲಕ್ಷ ರೂ. ಕೊಡದೆ ಮಹಿಳೆಗೆ ಮೋಸ

Crime Logo
Published on

ರಟ್ಟಿಹಳ್ಳಿ: ಮಿಡಿಸೌತೆ ಮಾರಾಟ ಮಾಡಿದ 20 ಲಕ್ಷ ರೂ. ಹಣವನ್ನು ಕೊಡದೆ ಮೋಸ ಮಾಡಿದ ಕುರಿತು ಇಲ್ಲಿಯ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ತಾಲೂಕಿನ ಕಣವಿ ಸಿದ್ದಿಗೇರಿ ಗ್ರಾಮದ ಕಮಲಾ ರಾಜು ಬಟ್ಲಕಟ್ಟಿ (26) ಮೋಸ ಹೋದವರು. ತಮಿಳುನಾಡಿನ ಮಹಾ ಅಗ್ರೀ ಕಲ್ಚರಲ್ ಪ್ರಾಡೆಕ್ಟ್‌ನ ಮಾಲೀಕ ಪಾಂಡಿಯಾ ರಾಜನ ಹಣ ಕೊಡದೆ ಮೋಸ ಮಾಡಿದ ಆರೋಪಿ.
ಈ ಕುರಿತು ದೂರು ನೀಡಿರುವ ಕಮಲಾ, ನಮ್ಮ ಪಿ.ಅರ್. ಪ್ಯಾಬ್ರಿಕ್ರೇಟರ್ ಕಂಪನಿ ಮೂಲಕ ಪಾಂಡಿಯಾಗೆ 2021 ಜೂನ್ 2ರಂದು 67 ಲಕ್ಷ ರೂ. ಮೌಲ್ಯದ 27,930 ಕೆ.ಜಿ. ಮಿಡಿಸೌತೆ ಮಾರಾಟ ಮಾಡಲಾಗಿತ್ತು. ಅದರಲ್ಲಿ ಪಾಂಡಿಯಾ 47 ಲಕ್ಷ ರೂ. ನಮ್ಮ ಖಾತೆಗೆ ಜಮಾ ಮಾಡಿದ್ದಾನೆ. ಆದರೆ, ಬಾಕಿಯಿರುವ 20 ಲಕ್ಷ ರೂ. ಕೊಡದೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net