ಕೊಬ್ಬರಿ ಹೋರಿ ಚಾಮುಂಡಿ ಇನ್ನಿಲ್ಲ ! ಸಾವಿರಾರು ಅಭಿಮಾನಿಗಳ ಕಣ್ಣೀರು..

2 HVR 7 Kobbari Hori
Published on

ರಟ್ಟಿಹಳ್ಳಿ- ಮಾಸೂರು: ತನ್ನ ತೀಕ್ಷ್ಣ ನೋಟ, ಕಟ್ಟುಮಸ್ತಾದ ದೇಹ ಸಿರಿಯ ಮೂಲಕ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ರಟ್ಟಿಹಳ್ಳಿ ತಾಲೂಕಿನ ಚಾಮುಂಡಿ ಹಾಗೂ ಮೂಕಾಂಬಿಕಾ ಎಕ್ಸ್‌ಪ್ರೆಸ್ ಎಂದೇ ಖ್ಯಾತಿ ಪಡೆದಿದ್ದ ಕೊಬ್ಬರಿ ಹೋರಿ ಶುಕ್ರವಾರ ಅಸುನೀಗಿದೆ.
ಹೋರಿ ಬೆದರಿಸುವ ಅಥವಾ ಕೊಬ್ಬರಿ ಹೋರಿ ಸ್ಪರ್ಧೆಯ ಅಖಾಡದಲ್ಲಿ ಚಾಮುಂಡಿ ಭರ್ಜರಿ ಹವಾ ಸೃಷ್ಟಿಸಿತ್ತು. ರಟ್ಟಿಹಳ್ಳಿ- ಮಾಸೂರು ಸೇರಿದಂತೆ ಜಿಲ್ಲೆ, ಪಕ್ಕದ ಜಿಲ್ಲೆ, ಹೊರ ರಾಜ್ಯಗಳ ಸ್ಪರ್ಧೆಗಳಲ್ಲೂ ಅನೇಕ ಬಹುಮಾನ, ಪ್ರಶಸ್ತಿ, ಬಿರುದುಗಳನ್ನು ಚಾಮುಂಡಿ ತನ್ನದಾಗಿಸಿಕೊಂಡಿತ್ತು.
ಅನಾರೋಗ್ಯಕ್ಕೆ ತುತ್ತಾಗಿದ್ದ ಚಾಮುಂಡಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ. ಮನೆಗ ಸದಸ್ಯನಂತೆ ಸಾಕಿದ್ದ ಮಾಲೀಕರು ಹಾಗೂ ಅಭಿಮಾನಿಗಳು ಚಾಮುಂಡಿಯ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಮನಕಲಕುವಂತಿತ್ತು. ಹೋರಿಯ ದರ್ಶನಕ್ಕೆ ಅಭಿಮಾನಿಗಳ ದಂಡೇ ಹರಿದುಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net