ಮದುವೆ ಮಾಡಿಸಲಿಲ್ಲ ಎಂದು ಯುವಕ ಆತ್ಮಹತ್ಯೆ

Published on

ರಟ್ಟಿಹಳ್ಳಿ: ಮದುವೆ ಮಾಡಿಸುವಂತೆ ಮನೆಯಲ್ಲಿ ಪೀಡಿಸುತ್ತಿದ್ದ ಯುವಕನೊಬ್ಬ ಮದುವೆ ಮಾಡಿಕೊಳ್ಳುವುದು ತಡವಾಗಿದೆ ಎಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯತ್ತಿನಹಳ್ಳಿ ತಾಂಡಾದಲ್ಲಿ ಬುಧವಾರ ಸಂಭವಿಸಿದೆ.
ಅಣ್ಣಪ್ಪ ದುರ್ಗಾನಾಯ್ಕ ಲಮಾಣಿ (28) ಮೃತ ಯುವಕ.
ಈತ ತನಗೆ ಮದುವೆ ಮಾಡಿಸುವಂತೆ ತಂದೆ ತಾಯಿ ಬಳಿ ಒತ್ತಾಯ ಮಾಡುತ್ತಿದ್ದ. ಪಾಲಕರು ಕನ್ನೆ ಸಿಕ್ಕ ಕೂಡಲೇ ಮದುವೆ ಮಾಡುತ್ತೇವೆ ಎಂದು ಹೇಳುತ್ತ ಬಂದಿದ್ದರು. ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಮದ್ಯ ಸೇವಿಸಿ ತಾಂಡಾ ಬಳಿಯ ಹೊಸಕೆರೆ ದಂಡೆಯ ಮೇಲೆ ಯಾವುದೋ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net