ರಟ್ಟಿಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ

16-rtl manavi
Published on

ರಟ್ಟಿಹಳ್ಳಿ: ತಾಲೂಕು ಕೇಂದ್ರವಾದ ರಟ್ಟಿಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಶಾಸಕ ಯು.ಬಿ. ಬಣಕಾರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ವೇದಿಕೆ ತಾಲೂಕು ಅಧ್ಯಕ್ಷ ಕರಿಯಪ್ಪ ಕೊರವರ ಮಾತನಾಡಿ, 63 ಗ್ರಾಮಗಳಿಗೆ ತಾಲೂಕು ಕೇಂದ್ರವಾಗಿರುವ ರಟ್ಟಿಹಳ್ಳಿಗೆ ನಿತ್ಯ ದೂರದ ಊರುಗಳಿಂದ ನೂರಾರು ಸಾರ್ವಜನಿಕರು ಕೆಲಸ-ಕಾರ್ಯಗಳಿಗೆ ಆಗಮಿಸುತ್ತಾರೆ. ತಹಸೀಲ್ದಾರ್ ಕಚೇರಿಯಲ್ಲಿ ಸಮರ್ಪಕ ಕ್ಯಾಂಟೀನ್ ವ್ಯವಸ್ಥೆ ಇಲ್ಲ. ಹೀಗಾಗಿ, ಪಟ್ಟಣದ ಖಾಸಗಿ ಹೋಟೆಲ್‌ಗಳಲ್ಲಿ ಹೆಚ್ಚು ಹಣ ನೀಡಿ ಊಟೋಪಹಾರ ಮಾಡಬೇಕಾಗಿದೆ. ಆದ್ದರಿಂದ ಬಡ ಮಧ್ಯಮ ವರ್ಗದ ಜನರ ಹಸಿವನ್ನು ನೀಗಿಸಲು ಇಂದಿರಾ ಕ್ಯಾಂಟಿನ ಅತೀ ಅವಶ್ಯವಾಗಿದೆ ಎಂದರು. ಶಾಸಕ ಯು.ಬಿ. ಬಣಕಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಹಳೆಯ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲು ಆದೇಶಿಸಿದ್ದಾರೆ. ರಟ್ಟಿಹಳ್ಳಿಯಲ್ಲಿಯೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸುವಂತೆ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದರು. ವೇದಿಕೆ ನಗರ ಘಟಕದ ಅಧ್ಯಕ್ಷ ಇರ್ಫಾನ್ ಜಡದಿ, ಮಂಜು ಕಾಯಕದ, ಪ್ರವೀಣ ಉಜ್ಜಕ್ಕಳವರ, ದಾದುಸಾಬ್ ಕೂಲಂಬಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net