

ರಟ್ಟಿಹಳ್ಳಿ: ಹನ್ನೆರಡನೇ ಶತಮಾನದಲ್ಲಿ ಶರಣರಾದ ಬಸವಣ್ಣ, ಅಲ್ಲಮ್ಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣಅವರು ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ವಚನಗಳ ಮೂಲಕ ಕಾಯಕ ನಿಷ್ಠೆ, ಮೌಢ್ಯತೆ ನಿವಾರಣೆಗೆ ಶ್ರಮಿಸಿದರು ಎಂದು ಹಡಪದ ಅಪ್ಪಣ್ಣ ಸಮಾಜದ ತಾಲೂಕು ಅಧ್ಯಕ್ಷ ವೀರಪ್ಪ ಕಟ್ಟೀಮನಿ ಹೇಳಿದರು.
ಪಟ್ಟಣದಲ್ಲಿ ಹಡಪದ ಅಪ್ಪಣ್ಣನವರ 889ನೇ ಜಯಂತ್ಯುತ್ಸವ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳ ಶಿಕ್ಷಣಕ್ಕೆ ಎಲ್ಲರೂ ಆದ್ಯತೆ ನೀಡಬೇಕು. ಸಭಾಭವನ ನಿರ್ಮಾಣಕ್ಕೆ ಸರ್ಕಾರ ಹೆಚ್ಚಿನ ಅನುದಾನ ಮಂಜೂರು ಮಾಡಬೇಕು ಎಂದರು.
ತಹಸೀಲ್ದಾರ್ ಕಚೇರಿಯಲ್ಲಿ: ತಹಸೀಲ್ದಾರ್ ಕಚೇರಿಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಿಸಲಾಯಿತು. ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಿಂದ ಹೊರಟ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆಗೆ ಉಪತಹಸೀಲ್ದಾರ್ ಗಣೇಶ ಕಟ್ಟೀಮನಿ ಚಾಲನೆ ನೀಡಿದರು. ಸಮಾಜದ ಕಾರ್ಯದರ್ಶಿ ಹಾಲಸಿದ್ದಪ್ಪ ಕಾಯಕದ, ಅಶೋಕ ಕಾಯಕದ, ಲಿಂಗರಾಜ ಕಾಯಕದ, ಅಶೋಕಪ್ಪ ಗದಗೆಪ್ಪ ಕಾಯಕದ, ಹನುಮಂತಪ್ಪ ಗುಂಡಗಟ್ಟಿ, ಈಶ್ವರಪ್ಪ ಚಪ್ಪರದಹಳ್ಳಿ, ಚಂದ್ರಶೇಖರ ಹಡಪದ, ಶಂಕ್ರಪ್ಪ ನೇಶ್ವಿ, ಮಂಜುನಾಥ ಗುಂಡಗಟ್ಟಿ, ವೀರೇಶ ಕಡಕೋಳ, ಬಸವರಾಜ ಗುತ್ತಲ, ಪರಶುರಾಮ ಕೋಡಮಗ್ಗಿ, ಸೋಮಣ್ಣ ಪುರ್ತಗೇರಿ, ಗಣೇಶಪ್ಪ ಗುಂಡಗಟ್ಟಿ, ವೀರೇಶ ಕಾಯಕದ, ರಾಜು ಕಾಯಕದ ಇತರರು ಇದ್ದರು.