ರಟ್ಟಿಹಳ್ಳಿ 19 ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟ

rtl gp misalu
Published on

ರಟ್ಟಿಹಳ್ಳಿ: ಪಟ್ಟಣದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ರಘುನಂದನ್‌ಮೂರ್ತಿ ಅಧ್ಯಕ್ಷತೆಯಲ್ಲಿ ತಾಲೂಕಿನ 19 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ಮೀಸಲಾತಿ ನಿಗದಿಪಡಿಸಲಾಯಿತು. ಹುಲ್ಲತ್ತಿ ಗ್ರಾಪಂ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ನೇಶ್ವಿ ಗ್ರಾಪಂ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಪ್ರವರ್ಗ-ಎ ಮಹಿಳೆ, ಇಂಗಳಗೊಂದಿ ಅಧ್ಯಕ್ಷ ಪ್ರವರ್ಗ-ಬಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಶಿರಗಂಬಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಪ್ರವರ್ಗ-ಎ, ಮಕರಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಕುಡುಪಲಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಹಿರೇಮೊರಬ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕಣವಿಸಿದ್ದಗೇರಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‌ಸಿ ಮಹಿಳೆ, ಕಡೂರು ಅಧ್ಯಕ್ಷ ಪ್ರವರ್ಗ-ಎ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಹಳ್ಳೂರು ಅಧ್ಯಕ್ಷ ಎಸ್‌ಸಿ ಮಹಿಳೆ, ಉಪಾಧ್ಯಕ್ಷ ಪ್ರವರ್ಗ-ಬಿ ಮಹಿಳೆ, ಹಿರೇಕಬ್ಬಾರ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪ್ರವರ್ಗ-ಎ ಮಹಿಳೆ, ತಡಕನಹಳ್ಳಿ ಅಧ್ಯಕ್ಷ ಪ್ರವರ್ಗ-ಎ, ಉಪಾಧ್ಯಕ್ಷ ಎಸ್‌ಟಿ ಮಹಿಳೆ, ಅಣಜಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್‌ಟಿ, ನಾಗವಂದ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪ್ರವರ್ಗ-ಎ, ಮಾಸೂರು ಅಧ್ಯಕ್ಷ ಎಸ್‌ಟಿ ಉಪಾಧ್ಯಕ್ಷ ಸಾಮಾನ್ಯ, ಮೇದೂರು ಅಧ್ಯಕ್ಷ ಪ್ರವರ್ಗ-ಎ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕೋಡಮಗ್ಗಿ ಅಧ್ಯಕ್ಷ ಎಸ್‌ಟಿ ಮಹಿಳೆ ಉಪಾಧ್ಯಕ್ಷ ಸಾಮಾನ್ಯ, ಕುಂಚೂರು ಅಧ್ಯಕ್ಷ ಪ್ರವರ್ಗ-ಎ ಮಹಿಳೆ, ಉಪಾಧ್ಯಕ್ಷ ಎಸ್‌ಸಿ, ಚಿಕ್ಕಯಡಚಿ ಅಧ್ಯಕ್ಷ ಎಸ್‌ಟಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ಘೋಷಣೆ ಮಾಡಲಾಯಿತು. ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ತಹಸೀಲ್ದಾರ್ ವಿಶ್ವೇಶ್ವರ ರೆಡ್ಡಿ, ಎಸಿ ರಾಯಪ್ಪ ಹುಣಸಗಿ, ಕಂದಾಯ ನಿರೀಕ್ಷಕ ಶಂಕರ ಎಂ.ಎ., ತಾಪಂ ಇಒ ಶಶಿಧರ ಎಚ್., ದೇವರಾಜ ಸಣ್ಣಕಾರಗೇರ, ಜಿ.ಜಿ. ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net