ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಪ್ರತಿಭಟನೆ

28 RTL 02
Published on

ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ

ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ತಾಲೂಕು ಬಿಜೆಪಿ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪಕ್ಷದ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಮಾತನಾಡಿ, ದುಷ್ಟ ಶಕ್ತಿಗಳು ಕೂಡಿಕೊಂಡು ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿವೆ. ಧರ್ಮಸ್ಥಳ ಧರ್ಮಾಧಿಕಾರಿಗಳಿಗೆ ಕೆಟ್ಟ ಹೆಸರು ತರುವುದಕ್ಕೆ ಕೋಮು ಶಕ್ತಿಗಳು ಹುನ್ನಾರ

ನಡೆಸುತ್ತಿವೆ. ಅಲ್ಲದೆ, ಹಿಂದುಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

ಅಪಪ್ರಚಾರ ಮಾಡುತ್ತಿರುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಆರ್.ಎನ್. ಗಂಗೋಳ, ಎನ್.ಎಂ. ಈಟೇರ, ಪಾಲಕ್ಷಗೌಡ ಪಾಟೀಲ, ಮಾಲತೇಶ ಬೆಳಕೇರಿ, ಸುಶೀಲ ನಾಡಗೇರ

ಮಾತನಾಡಿ, ಹಿಂದು ದೇವಾಲಯಗಳಿಗೆ ಸಾರ್ವಜನಿಕರು ಹೋಗದಂತೆ ಮಾಡುವ ದುರುದ್ದೇಶದಿಂದ ಕಾಣದ ಕೈಗಳು ಈ ಕೆಲಸ ಮಾಡುತ್ತಿವೆ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಇದಕ್ಕೂ ಮೊದಲು ‘ಧರ್ಮಸ್ಥಳ ಉಳಿಸಿ’ ಹೋರಾಟಕ್ಕೆ ಚಾಲನೆ ನೀಡಲಾಯಿತು. ಶ್ರೀವೀರಭದ್ರೇಶ್ವರ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಶಿರಸ್ತೇದಾರ್‌ಗೆ ಮನವಿ ಸಲ್ಲಿಸಲಾಯಿತು. ಶಂಬಣ್ಣ ಗೂಳಪ್ಪನವರ, ಸುಭಾಷ ಹದಡೇರ, ಶ್ರೀದೇವಿ ಬೈರಪ್ಪನವರ, ರವಿ ಹದಡೇರ, ಬಸವರಾಜ ಕಟ್ಟಿಮನಿ, ಗಣೇಶ ವೇರ್ಣೇಕರ, ಹನುಮಂತಪ್ಪ ಗಾಜೇರ, ಶ್ರೀನಿವಾಸ ಬೈರೋಜಿ, ಕೆ.ವೈ. ಬಾಜಿರಾಯರ, ಮಾಲತೇಶಗೌಡ ಗಂಗೋಳ, ರಾಜನಗೌಡ ಪಾಟೀಲ, ಆನಂದಪ್ಪ ಹಾದಿಮನಿ, ವೀರನಗೌಡ ಮಕರಿ, ರವಿ ಮುದ್ದಣ್ಣನವರ, ರಾಘವೇಂದ್ರ ಹರವಿಶೆಟ್ರ, ಅಭಿನಂದನ ಬೋಗಾರ, ಸುರೇಶ ಬೆಣ್ಣಿ, ಎನ್.ಸಿ.ಕಠಾರೆ, ವಿನಾಯಕ

ಹದಡಿ, ಕಾವ್ಯ ಪಾಟೀಲ, ಸರೋಜ ಹುರಕಡ್ಲಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net