

ರಟ್ಟಿಹಳ್ಳಿ: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಿವಮೊಗ್ಗ ವಿಭಾಗದ ವತಿಯಿಂದ ಸೆ. 10ರಂದು ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ ರಸ್ತೆಯ ಎರಡೂ ಬದಿಯಲ್ಲಿನ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ನಡೆಯಲಿದೆ. ಹೀಗಾಗಿ, ಪಟ್ಟಣದ ವಿದ್ಯುತ್ ಉಪಕೇಂದ್ರದಿಂದ ರಟ್ಟಿಹಳ್ಳಿ ಪಟ್ಟಣ ಮತ್ತು ಕಡೂರ ಎನ್‌ಜೆವೈ 11 ಕೆ.ವಿ. ಮಾರ್ಗಗಳಲ್ಲಿ ಬೆಳಗ್ಗೆ 11ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಪಟ್ಟಣದ ಐ.ಬಿ. ಸರ್ಕಲ್‌ನಿಂದ ಪ್ರಿಯದರ್ಶಿನಿ ಕಾಲೇಜ್‌ವರೆಗೆ ರಸ್ತೆ ಕಾಮಗಾರಿ ನಡೆಯಲಿದೆ. ರಟ್ಟಿಹಳ್ಳಿ ಪಟ್ಟಣ, ಕಡೂರು, ಕುಡಪಲಿ, ಬುಳ್ಳಾಪುರ, ಸಣ್ಣಗುಬ್ಬಿ, ಹಾಡೇವು ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.