ಬೈಕ್‌ನಿಂದ ಬಿದ್ದು ಮೃತಪಟ್ಟ ವೃದ್ಧ

Bike Accident_2
Published on

ರಟ್ಟಿಹಳ್ಳಿ: ಬೈಕ್‌ನಿಂದ ಬಿದ್ದು ವೃದ್ಧರೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಪುರದಗೇರಿ ಗ್ರಾಮದ ಉಪ್ಪಾರನಂಗಿ ಹಳ್ಳದ ಹತ್ತಿರ ಸೋಮವಾರ ನಡೆದಿದೆ.
ದಾವಣಗೆರೆ ಜಿಲ್ಲೆ ಉಕ್ಕಡಗಾತ್ರಿ ಗ್ರಾಮದ ನಿಂಗಪ್ಪ ಹನುಮಂತಪ್ಪ ಕಾಯಕದ (71) ಮೃತ ವೃದ್ಧ.
ಇವರು ಬೈಕ್ ತೆಗೆದುಕೊಂಡು ಚಿಕ್ಕಬಾಸೂರ ಕಡೆಯಿಂದ ಪುರದಗೇರಿಗೆ ತೆರಳುತ್ತಿದ್ದ ಸಮಯದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net