ಕ್ರೆಡಿಟ್ ಕಾರ್ಡ್ ಅಪಡೇಟ್ ಹೆಸರಿನಲ್ಲಿ 74 ಸಾವಿರ ರೂ. ವಂಚನೆ

Cibra
Published on

ರಟ್ಟಿಹಳ್ಳಿ: ಎಸ್‌ಬಿಐ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಮ್ಯಾನೇಜರ್ ಎಂದು ಹೇಳಿಕೊಂಡು ಫೋನ್ ಮಾಡಿದ ವ್ಯಕ್ತಿ ಗ್ಯಾರೇಜ್ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಖಾತೆಯಿಂದ 74 ಸಾವಿರ ರೂ.ಅನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ ಕುರಿತು ಹಾವೇರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.
ಪಟ್ಟಣದ ಬನಶಂಕರಿ ನಗರದ ಜಗದೀಶ ಹುಚ್ಚಪ್ಪ ಇಳಿಗೇರ (38) ಮೋಸ ಹೋದವರು.
ಇವರಿಗೆ ಫೋನ್ ಮಾಡಿದ ಅಪರಿಚಿತ ವ್ಯಕ್ತಿ ನಿಮ್ಮ ಕ್ರೆಡಿಟ್ ಕಾರ್ಡ್ ಚಾಲನೆ ಮಾಡಲು ನಿಮಗೆ ಬಂದಿರುವ ಓಟಿಪಿ ಹೇಳಿ ಎಂದಿದ್ದಾನೆ. ಜಗದೀಶ ತಮ್ಮ ಫೋನ್‌ಗೆ ಬಂದ ಓಟಿಪಿ ಹೇಳುತ್ತಿದ್ದಂತೆ ಅವರ ಖಾತೆಯಿಂದ 74 ಸಾವಿರ ರೂ. ಕಟ್ ಆಗಿರುವ ಮೇಸೆಜ್ ಬಂದಿದೆ. ನಂತರ ಅದೇ ನಂಬರ್‌ಗೆ ಫೋನ್ ಮಾಡಿದಾಗ ನಾಟ್ ರೀಚೆಬಲ್ ಆಗಿದೆ. ಪ್ರಕರಣ ದಾಖಸಿಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net