

ರಟ್ಟಿಹಳ್ಳಿ: ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಮತ್ತು ಭಗತ್‌ಸಿಂಗ್ ಗೆಳೆಯರ ಬಳಗದ ವತಿಯಿಂದ ಹಿಂದು ಮಹಾ ಗಣಪತಿ ಪ್ರತಿಷ್ಠಾಪನೆ ಮಾಡುವ ಪ್ರಯುಕ್ತ ಬುಧವಾರ ಮೊದಲ ಹಂತವಾಗಿ ಸ್ಥಳೀಯ ಭಗತ್‌ಸಿಂಗ್ ವೃತ್ತದ ಬಳಿ ಧ್ವಜ ಕಂಬ ಸ್ಥಾಪನೆ ಮಾಡಲಾಯಿತು.
ಪರಿಷತ್ತಿನ ತಾಲೂಕು ಸಂಯೋಜಕ ಮೃತ್ಯುಂಜಯ ಬೆಣ್ಣಿ ಮಾತನಾಡಿ ಗಣೇಶೋತ್ಸವ ನಿಮಿತ್ತ ಧ್ವಜ ಕಂಬ ಸ್ಥಾಪನೆ, ಗೋಮಾತೆ ಪೂಜೆ, ಭಗವಾ ಧ್ವಜವನ್ನು ಸ್ಥಾಪನೆ ಮಾಡಲಾಗಿದೆ. ಹಿಂದು ಸಂಪ್ರದಾಯದಂತೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಗಣೇಶನ ಉತ್ಸವವನ್ನು ಪ್ರತಿ ವರ್ಷದಂತೆ ಇಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದರು.
ಶಂಕರಗೌಡ ಚೆನ್ನಗೌಡ್ರ, ದೇವರಾಜ ನಾಗಣ್ಣನವರ, ರುದ್ರಗೌಡ ಪಾಟೀಲ, ಮಾಲತೇಶ ಬೆಳಕೇರಿ, ನವೀನ ಮಾದರ, ಆಕಾಶ ಪಾಟೀಲ, ಗಣೇಶ ಸುಣಗಾರ, ಸಿದ್ದಪ್ಪ ಹರಿಜನ ಇತರರು ಇದ್ದರು.