

ರಟ್ಟಿಹಳ್ಳಿ: ತಾಲೂಕಿನ ಚಿಕ್ಕಕಬ್ಬಾರ ಗ್ರಾಮದಲ್ಲಿ ದಸರಾ ಹಬ್ಬದ ನಿಮಿತ್ತ ಅ. 3 ರಿಂದ 12ರವರೆಗೆ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ. 3ರಂದು ಬೆಳಗ್ಗೆ 6 ಗಂಟೆಗೆ ದೇವಿಗೆ ಅಭಿಷೇಕ, ಘಟಸ್ಥಾಪನೆ ಮೂಲಕ ದೇವಿ ಉತ್ಸವ ಮೂರ್ತಿ ಮೆರವಣಿಗೆ ಜರುಗಲಿದೆ. ಪ್ರತಿ ದಿನ ರಾತ್ರಿ 8 ಗಂಟೆಗೆ ಪುರಾಣ ಪ್ರವಚನ ರತ್ನಾಕರ ಗೋವಿಂದಪ್ಪ ಕೋಟಿಹಾಳ, ರಾಜೇಂದ್ರ ಸಿ.ಬಿ., ಚಂದ್ರಪ್ಪ ಹಿರೇಕಬ್ಬಾರ, ಮಂಜುನಾಥ ಕೂಲೇರ ಅವರ ನೇತೃತ್ವದಲ್ಲಿ ಜರುಗಲಿದೆ. ತಿಪ್ಪೇಶ ಧೂಳಪ್ಪನವರ, ಗೋವಿಂದಪ್ಪ ಪೂಜಾರ ಮತ್ತು ತಂಡದಿಂದ ಸಂಗೀತ ಮತ್ತು ಭಜನಾ ಕಾರ್ಯಕ್ರಮ ನೆರವೇರಲಿವೆ. ಶ್ರೀ ಚಂದ್ರಶೇಖರ ಹಿರೇಮಠ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಭಕ್ತರು, ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಬೇಕು ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ಕೇಶವಪ್ಪ ಮಾಳಗಿ, ಉಪಾಧ್ಯಕ್ಷ ಈಶ್ವರಪ್ಪ ತುಮ್ಮಿನಕಟ್ಟಿ, ವೀರನಗೌಡ್ರ ಪಾಟೀಲ, ಷಣ್ಮುಖಯ್ಯ ಅಂಚಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.