

ದಾಬಸ್‌ಪೇಟೆ: ಹೋಬಳಿಯ ಶಿವಗಂಗೆಯಲ್ಲಿ ಶ್ರೀವಸಂತರಾಯನ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ನೆರವೇರಿತು. ದೇವಸ್ಥಾನದ ಆಗಮಿಕರಾದ ಎನ್.ಎಸ್.ಸೋಮಸುಂದರ್ ದೀಕ್ಷಿತ್ ನೇತೃತ್ವದಲ್ಲಿ ರಥೋತ್ಸವದ ವಿಧಿವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ಹೋಮ-ಹವನಾದಿಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶಿವಗಂಗೆ ಗ್ರಾ.ಪಂ. ಮನುಪ್ರಸಾದ್, ಪಾರುಪತ್ತೇದ್ದಾರ್ ಬಿ.ಎಲ್.ಸುಮಾ, ಭಕ್ತರಾದ ವಕೀಲ ಎಸ್.ಮಹೇಶ್, ಬಿ.ಯಡಿಯೂರಪ್ಪ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎಸ್.ರೇಣುಕೇಶ, ಎಸ್.ಟಿ.ಸಿದ್ದರಾಜು, ಎಸ್.ಸಿ.ಹೋನ್ನಗಂಗಶೇಟ್ಟಿ, ಮಾದೇನಹಳ್ಳಿ ನೀಲಕಂಟಪ್ಪ, ಮಣಿಕಂಠ, ಹೇಮಂತ, ದರ್ಶನ್ ಶೇಟ್ಟಿ ತೇರನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.