

ರಟ್ಟಿಹಳ್ಳಿ: ತಾಲೂಕಿನ ಮಕರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರತ್ನಮ್ಮ ಬಸನಗೌಡ ಚನ್ನಗೌಡ್ರ ಮತ್ತು ಉಪಾಧ್ಯಕ್ಷರಾಗಿ ಶಾಂತಾ ಮರಡೆಪ್ಪ ಕಡೂರು ಅವಿರೋಧವಾಗಿ ಆಯ್ಕೆಯಾದರು.
ಗ್ರಾಪಂ ಅಧ್ಯಕ್ಷರಾಗಿದ್ದ ಲಲಿತಾ ಗಂಗೋಳ ಹಾಗೂ ಉಪಾಧ್ಯಕ್ಷರಾಗಿದ್ದ ಚಮನಸಾಬ ದೊಡ್ಡಮನಿ ರಾಜೀನಾಮೆಯಿಂದ ತೆರವಾದ ಎರಡು ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಚೆನ್ನಗೌಡ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಾಂತಾ ಮರಡೆಪ್ಪ ಕಡೂರು ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿ, ತಾಪಂ ಇಒ ಲಕ್ಷ್ಮೀಕಾಂತ ಬೊಮ್ಮಣ್ಣನವರ ಘೋಷಿಸಿದರು.
ಗ್ರಾಪಂ ಸದಸ್ಯರಾದ ಮಾಲತೇಶಗೌಡ ಗಂಗೋಳ, ಸುಮಾ ನಿಂಬೆಗುಂದಿ, ವೀರನಗೌಡ ಕ್ಯಾತಪ್ಪಳವರ, ಬಸವರಾಜ ಬಾಗೂರು, ರಂಗಪ್ಪ ಹಾರೋಗೊಪ್ಪದ, ಸುರೇಶ ಬ್ಯಾಡಗಿ, ಸುಧಾ ನಾಗೇನಹಳ್ಳಿ, ಕೌಸರಬಾನು ಹೆಡಿಯಾಳ, ಪಾರವ್ವ ಹುಲ್ಲತ್ತಿ, ಪ್ರವೀಣ ಗಂಗಪ್ಪನವರ, ರೇಣುಕಾ ಕನಕಣ್ಣನವರ, ಪಿಡಿಒ ಗಣೇಶ ಬಿದರಿ, ಕಾರ್ಯದರ್ಶಿ ಎಸ್.ಎ. ಶೆರೇಗಾರ, ಸಿಬ್ಬಂದಿ ಸಿ.ಡಿ. ನಾಡರ ಮತ್ತು ಪಿ.ಎಚ್. ಕೋಣನವರ ಹಾಗೂ ಮಕರಿ, ದೊಡ್ಡಗುಬ್ಬಿ ಮತ್ತು ಯಡಗೋಡ ಗ್ರಾಮಸ್ಥರು ಉಪಸ್ಥಿತರಿದ್ದರು.