ತಾರೀಕೊಪ್ಪದಲ್ಲಿ ರತ್ನಾ-ಪ್ರೇಮಾ ಕಾರುಬಾರು

Tarikoppa
Published on

ಶಿರಹಟ್ಟಿ: ತಾಲೂಕಿನ ತಾರೀಕೊಪ್ಪ ಗ್ರಾಪಂ ಅಧ್ಯಕ್ಷೆಯಾಗಿ ರತ್ನಾ ಮಂಜಪ್ಪ ಈರಗಾರ, ಉಪಾಧ್ಯಕ್ಷೆಯಾಗಿ ಪ್ರೇಮಾ ಮಹಾಂತೇಶ ಲಮಾಣಿ ಆಯ್ಕೆಯಾದರು.

10 ಸದಸ್ಯರನ್ನು ಹೊಂದಿರುವ ಗ್ರಾಪಂಗೆ ಅಧ್ಯಕ್ಷ ಸ್ಥಾನ ಅನುಸೂಚಿತ ಪಂಗಡ ಮಹಿಳೆ, ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಮೀಸಲು ಅನ್ವಯ ರತ್ನಾ ಈರಗಾರ ಒಬ್ಬರೇ ಸದಸ್ಯರಿದ್ದರಿಂದ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಈರಣ್ಣ ಮಾಗಳದ ಮತ್ತು ಪ್ರೇಮಾ ಲಮಾಣಿ ನಾಮಪತ್ರ ಸಲ್ಲಿಸಿದ್ದರು. ಪ್ರೇಮವ್ವಗೆ 5 ಮತಗಳು ಲಭಿಸಿದರೆ, ಈರಣ್ಣ ಮಾಗಳದ ಅವರು 4 ಮತಗಳನ್ನು ಪಡೆದರು.

ಗ್ರಾಪಂ ಸದಸ್ಯರಾದ ಈರಣ್ಣ ಮಾಗಳದ, ಯಲ್ಲಪ್ಪ ಕಂಬಳಿ, ಶಾಂತವ್ವ ಸೂರಣಗಿ, ಭೀಮಪ್ಪ ಲಮಾಣಿ, ವಿಜಯ ಲಮಾಣಿ, ಪೂರಪ್ಪ ಲಮಾಣಿ, ಶಾರದಾ ಲಮಾಣಿ, ಸವಿತಾ ಲಮಾಣಿ, ಲಕ್ಷ್ಮಣಗೌಡ ಪಾಟೀಲ, ಜಗದೀಶ ಪಾಟೀಲ, ಸುರೇಶಗೌಡ ಪಾಟೀಲ, ಶಂಕ್ರಪ್ಪ ನೀರಲಗಿ, ಗುಡ್ಡಪ್ಪ ಸೂರಣಗಿ, ಮಂಜಪ್ಪ ಕರೆಯತ್ತಿನ, ಸೋಮು ಲಮಾಣಿ, ಪ್ರಶಾಂತ ಪ್ಯಾಟಿ, ಶ್ರೀನಿವಾಸ ಸವದತ್ತಿ, ಮಲ್ಲೇಶ ಲಮಾಣಿ, ತುಳಸಗೇರಿ ಲಮಾಣಿ, ರೇವಣೆಪ್ಪ ಲಮಾಣಿ, ಮಹಾಂತೇಶ ಲಮಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net