ವೈಚಾರಿಕ ಚಿಂತನೆಗಳು ಸದಾ ಅನುಕರಣೀಯ

ಕಂಪ್ಲಿ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಅನುಭವ ಮಂಟಪ ಉದ್ಘಾಟನೆ, ನೂತನ ಕಳಸಾರೋಹಣ ಕಾರ್ಯಕ್ರಮದಲ್ಲಿ ಅತ್ತಿವೇರಿ ಬಸವಧಾಮದ ಬಸವ ಮಾತಾಜಿ ಮಾತನಾಡಿದರು. ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ, ಪ್ರಮುಖರಾದ ಜೆ.ಎನ್.ಶ್ರೀದೇವಿ ಗಣೇಶ್, ಕೆ.ಎಂ.ಹೇಮಯ್ಯಸ್ವಾಮಿ, ಗೊಗ್ಗ ಚನ್ನಬಸವರಾಜ, ಅರವಿ ಬಸನಗೌಡ ಇತರರಿದ್ದರು.

Published on

ಕಂಪ್ಲಿ: ಶಿವಶರಣೆ ಅಕ್ಕಮಹಾದೇವಿಯ ಆತ್ಮಸ್ಥೈರ್ಯವನ್ನು ಮಹಿಳೆಯರು ಅಳವಡಿಸಿಕೊಳ್ಳಬೇಕಿದೆ ಎಂದು ಅತ್ತಿವೇರಿ ಬಸವಧಾಮದ ಬಸವ ಮಾತಾಜಿ ಹೇಳಿದರು.

ನಗರದ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಅನುಭವ ಮಂಟಪ ಉದ್ಘಾಟನೆ, ನೂತನ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಕ್ಕನ ವೈಚಾರಿಕ ಚಿಂತನೆಗಳು ಸದಾಕಾಲ ಅನುಕರಣೆಗೆ ಯೋಗ್ಯವಾಗಿವೆ. ಸಾಮಾಜಿಕ ಮತ್ತು ರಾಜ ಪ್ರಭುತ್ವಗಳನ್ನು ವಿರೋಧಿಸಿ ಸ್ತ್ರೀ ಸಮಾನತೆ, ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಪ್ರಥಮ ಬಂಡಾಯ ಹೋರಾಟಗಾರ್ತಿಯಾಗಿದ್ದಾಳೆ ಎಂದು ತಿಳಿಸಿದರು.

ಅಕ್ಕಮಹಾದೇವಿ ದೇವಸ್ಥಾನ ಗೋಪುರದ ಕಳಸಾರೋಹಣ, ಅಕ್ಕಮಹಾದೇವಿ ಅನುಭವ ಮಂಟಪ ಉದ್ಘಾಟನೆಯನ್ನು ನಿವೃತ್ತ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿ, ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಬುಕ್ಕಸಾಗರ ವಿಶ್ವಾರಾಧ್ಯ ಶಿವಾಚಾರ್ಯರು ನೆರವೇರಿಸಿದರು. ಗೊಗ್ಗ ವಿಶಾಲಾಕ್ಷಮ್ಮ ಸ್ಮರಣಾರ್ಥ ಉಡಿತುಂಬುವ ಕಾರ್ಯಕ್ರಮ, ಅಕ್ಕಮಹಾದೇವಿ ಭಾವಚಿತ್ರ ಮೆರವಣಿಗೆ ನಡೆಯಿತು. ಪ್ರಮುಖರಾದ ಡಾ.ಜಗನ್ನಾಥ ಹಿರೇಮಠ, ಇಟಗಿ ಬಸವರಾಜಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net