

ಕುಳಗೇರಿ ಕ್ರಾಸ್:ಸಾಮಾಜಿಕ ಕ್ರಾಂತಿಯೊಂದಿಗೆ ವೈಚಾರಿಕ ಕ್ರಾಂತಿ ಮಾಡಿದ ಶ್ರೇಷ್ಠ ಸಂತ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಎಂದು ಶಿವಾನಂದ ಮಣ್ಣೂರಮಠ ಬಣ್ಣಿಸಿದರು.
ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ತೋಂಟದ ಸಿದ್ಧಲಿಂಗ ಶ್ರೀಗಳ 76ನೇ ಜಯಂತ್ಯುತ್ಸವ ಹಾಗೂ ವಿಶ್ವ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಜೀವನದುದ್ದಕ್ಕೂ ಬಸವಣ್ಣನವರ ಸಮಸಮಾಜದ ಕನಸನ್ನು ನನಸು ಮಾಡುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಅವರ ಜೀವನ ನಮಗೆ ಆದರ್ಶ ಎಂದರು.
ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿ, ಜಾತಿ, ಮತ ಪಂಥವೆನ್ನದೆ ಸಕಲರಿಗೂ ಲೇಸು ಬಯಸಿದ ತೋಂಟದ ಶ್ರೀಗಳನ್ನು ಸ್ಮರಿಸಬೇಕು ಎಂದರು.
ಪ್ರೊ. ಬಿ.ಸಿ. ಹನಮಂತಗೌಡ್ರ ಮಾತನಾಡಿದರು. ಉಪನ್ಯಾಸಕ ಆರ್.ಕೆ. ಐನಾಪೂರ, ವೀರಯ್ಯ ಸಾಲಿಮಠ, ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಇದ್ದರು.