ಗೋದಾಮಿನಿಂದ ಪಡಿತರ ಕಳವು

ಗೋದಾಮಿನಿಂದ ಪಡಿತರ ಕಳವು
Published on

ಚನ್ನರಾಯಪಟ್ಟಣ: ಪಟ್ಟಣದ ಟಿಎಪಿಸಿಎಂಎಸ್‌ನ ಗೋದಾಮಿನಿಂದ 1.16 ಲಕ್ಷ ರೂ. ಮೌಲ್ಯದ ಪಡಿತರವನ್ನು ಕಳವು ಮಾಡಲಾಗಿದೆ.

ಪಟ್ಟಣದ ಮೈಸೂರು ರಸ್ತೆಯ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆವರಣದಲ್ಲಿನ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಸಭಾಂಗಣದ ಬಾಗಿಲನ್ನು ಒಡೆದು ಒಳನುಗ್ಗಿದ ಕಳ್ಳರು ಒಂದು ಪೆಟ್ಟಿಗೆಯನ್ನು ಮುರಿದಿದ್ದಾರೆ. ನಂತರ ಪಡಿತರ ಹಂಚುವ ಗೋದಾಮಿನ ಬೀಗ ಒಡೆದು ಬಿಪಿಎಲ್ ಕಾರ್ಡುದಾರರಿಗೆ ಹಂಚಲು ತಂದಿದ್ದ ರಾಗಿ ಚೀಲಗಳ ಪೈಕಿ, ಹಂಚಿ ಉಳಿದಿದ್ದ 50 ಕೆ.ಜಿ.ತೂಕದ 46 ಚೀಲರಾಗಿ ಹಾಗೂ 50 ಕೆ.ಜಿ.ತೂಕದ 15 ಚೀಲ ಅಕ್ಕಿ ಮತ್ತು 480 ಖಾಲಿ ಚೀಲಗಳು ಕಳವು ಮಾಡಿದ್ದಾರೆ.

ಪಡಿತರ ಧಾನ್ಯ ಕಳವು ಮಾಡಿಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದೇ ಆವರಣದಲ್ಲಿರುವ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಶಾಖಾ ಕಚೇರಿ ಹಾಗೂ ಆಹಾರ ನಿಗಮದ ಕಚೇರಿಯ ಬೀಗ ಒಡೆಯಲು ಯತ್ನಿಸಲಾಗಿದ್ದು, ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಗತಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net