ಪಡಿತರ ಅಕ್ಕಿ ಅಕ್ರಮ ಸಾಗಣೆ: ಕೊಟ್ಟೂರು ಠಾಣೆಗೆ ಬರುತ್ತಿದ್ದಂತೆ ವಾಹನ ಜಿಗಿದು ಚಾಲಕ ಸೇರಿ ಇಬ್ಬರು ಪರಾರಿ

Kotturu Illegal Ration Rice Seize
ಕೊಟ್ಟೂರಿನಲ್ಲಿ ಗುರುವಾರ ಸಂಜೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ವಾಹನವನ್ನು ತಹಸೀಲ್ದಾರ್ ಜಿ.ಅನಿಲ್ ಕುಮಾರ್ ವಶಪಡಿಸಿಕೊಂಡರು.
Published on

ಕೊಟ್ಟೂರು: ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ವೇಳೆ ಸಿಕ್ಕಿಬಿದ್ದ ಮಿನಿ ಲಾರಿ ಚಾಲಕ ಹಾಗೂ ಇನ್ನೊಬ್ಬ ಸ್ಥಳೀಯ ಠಾಣೆಗೆ ಕರೆತಂದ ಬಳಿಕ ಪರಾರಿಯಾಗಿದ್ದಾರೆ.

ಚಿರಿಬಿ ಗ್ರಾಮದಿಂದ ಕೊಟ್ಟೂರು ಕಡೆಗೆ ಬರುತ್ತಿದ್ದಾಗ ಮಿನಿ ಲಾರಿಯನ್ನು ಪಟ್ಟಣದ ರಾಜೀವ್ ಗಾಂಧಿ ನಗರದಲ್ಲಿ ತಡೆದ ತಹಸೀಲ್ದಾರ್ ಜಿ.ಅನಿಲ್ ಕುಮಾರ್ ನೇತೃತ್ವದ ತಂಡ, ಒಂದು ಲಕ್ಷ ರೂ. ಮೊತ್ತದ 35.80 ಕ್ವಿಂಟಾಲ್‌ನ 94 ಅಕ್ಕಿ ಚೀಲಗಳನ್ನು ಗುರುವಾರ ವಶಕ್ಕೆ ಪಡೆಯಿತು. ಅಲ್ಲದೆ ಚಾಲಕ ಹಾಗೂ ಇನ್ನೊಬ್ಬನನ್ನು ಹಿಡಿದು ಠಾಣೆಗೆ ಕರೆತಂದಿದೆ. ಆದರೆ, ಈ ವೇಳೆ ಅಧಿಕಾರಿಗಳನ್ನು ಯಾಮಾರಿಸಿ ಇಬ್ಬರು ವಾಹನದಿಂದ ಜಿಗಿದು ಪರಾರಿಯಾಗಿದ್ದಾರೆ. ಮಧ್ಯಾಹ್ನ ದಾಳಿ ನಡೆದರೂ ರಾತ್ರಿ ಪ್ರಕರಣ ದಾಖಲಿಸಲಾಗಿದೆ.

ಪಿಎಸ್‌ಐ ನಾಗಪ್ಪ ಮಾತನಾಡಿ, ಕೂಡ್ಲಿಗಿ ಆಹಾರ ನಿರೀಕ್ಷಕ ಟಿ.ಗೀತಾಂಜಿನಿ ದೂರಿನ ಮೇರೆಗೆ ಆರೋಪಿತರಿಂದ ವಶಕ್ಕೆ ಪಡೆದಿರುವ ಮೊಬೈಲ್ ಟ್ರ್ಯಾಕಿಂಗ್‌ಗೆ ಹಾಕಿ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು. ದಾಳಿ ವೇಳೆ ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಸಿದ್ದಲಿಂಗೇಶ್, ಕೆ.ರಮೇಶ್, ಆಹಾರ ನಿರೀಕ್ಷಕ ಗೀತಾಂಜಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net