

ಕೋಲಾರ: ಬಡವರಿಗೆ ದೊರೆಯಬೇಕಾದ ಪಡಿತರ ಅಕ್ಕಿಯನ್ನು ಖಾಸಗಿ ರೈಸ್ ಮೀಲ್ ಮಾಲೀಕರು ಪಾಲಿಶ್ ಮಾಡಿ ಗ್ರಾಹಕರಿಗೆ ಮಾರಾಟ ಮಾಡುವ ದಂಧೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ನೀಡುತ್ತಿರುವ ಉಚಿತ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ತೆಗೆದುಕೊಂಡು ಹೋಗಿ ಗೋದಾಮಿನಲ್ಲಿ ಸಂಗ್ರಹಿಸಿದ ಬಗ್ಗೆ ಜಿಲ್ಲಾ ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ಅಧಿಕಾರಿಗಳಿಗೆ ಬಂದ ಮಾಹಿತಿಯ ಮೇರೆಗೆ ನಗರದ ಟಮಕದಲ್ಲಿನ ಬಾಲಾಜಿ ರೈಸ್ ಮೀಲ್ ಮೇಲೆ ದಾಳಿ ನಡೆಸಿದಾಗ ಪಾಲಿಶ್ ದಂಧೆ ಪತ್ತೆಯಾಗಿದೆ.
ದಾಳಿ ನಡೆಸಿದ ಸಂದರ್ಭದಲ್ಲಿ 40 ಲಕ್ಕೂ ಹೆಚ್ಚಿನ ಹೆಚ್ಚಿನ ಮೌಲ್ಯದ 50 ಕೆಜಿಯ 2 ಸಾವಿರಕ್ಕೂ ಹೆಚ್ಚಿನ ಅಕ್ಕಿ ಚೀಲಗಳು ಹಾಗೂ 5 ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಅನ್ನಭಾಗ್ಯ ಯೋಜನೆಯಡಿ ನ್ಯಾಯ ಬೆಲೆ ಅಂಗಡಿಗಳಿಂದ ವಿತರಣೆಯಾಗುವ ಅಕ್ಕಿಯನ್ನು ಗ್ರಾಹಕರಿಂದ ಕೆಲ ಏಜೆಂಟರು ಪ್ರತಿ ಕೆಜಿಗೆ 14&17 ರೂ. ಕೊಟ್ಟು ಖರೀದಿಸುತ್ತಾರೆ. ಹೀಗೆ ಖರೀದಿ ಮಾಡಿದ ಅಕ್ಕಿಯನ್ನು 19&20 ರೂ.ನಂತೆ ಮಿಲ್ಗಳಿಗೆ ಮಾರಾಟ ಮಾಡುತ್ತಾರೆ. ಮತ್ತೊಂದೆಡೆ ಕೆಲ ನ್ಯಾಯಬೆಲೆ ಅಂಗಡಿಯವರು ನೇರವಾಗಿ ಮೂಟೆ ಮೂಟೆ ಮಾರಾಟ ಮಾಡಿದರೆ, ಕೆಲವರು ನೇರ ಗೋದಾಮುಗಳಿಂದಲೇ ಮಿಲ್ಗಳಿಗೆ ಸಾಗಣೆ ಮಾಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಆಹಾರ ಇಲಾಖೆಯ ನಿರೀಕ ಎ.ಕ್ರಾಂತಿವರ್ಮಾ ಅವರು ಬಾಲಾಜಿ ರೈಸ್ಮೀಲ್ ಮಾಲೀಕರಾದ ರುವಂಶಿ, ಚಿದಂಬರಂ ವಿರುದ್ಧ ಗಲ್ಪೇಟೆ ಪೊಲೀಸರಿಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.