ಹಿರೇಕಾನವಂಗಲದಲ್ಲಿ ಪಡಿತರ ವಿತರಣೆ ಕೇಂದ್ರ

20 TKE 2,2,2
Published on

ತರೀಕೆರೆ: ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸಂಘದ 13.87 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಚಿಕ್ಕಾನವಂಗಲ ಪಿಎಸಿಎಸ್ ಅಧ್ಯಕ್ಷ ಎಚ್.ಎಸ್.ಮಲ್ಲಿಕಾರ್ಜುನಪ್ಪ ಹೇಳಿದರು.
ಚಿಕ್ಕಾನವಂಗಲ ಗ್ರಾಮದ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, 1.20 ಕೋಟಿ ರೂ. ಷೇರು ಬಂಡವಾಳ ಹೊಂದಿರುವ ಪಿಎಸಿಎಸ್ 23.83 ಕೋಟಿ ರೂ ವ್ಯವಹಾರ ನಡೆಸಿದೆ. 877 ರೈತರಿಗೆ 10.97 ಕೋಟಿ ರೂ. ಕೆಸಿಸಿ ಬೆಳೆ ಸಾಲ ನೀಡಿದೆ. ಸಿಡಿಸಿಸಿ ಬ್ಯಾಂಕ್ ಅನುಮತಿ ನೀಡಿದರೆ ಜಾವೂರು ಮತ್ತು ಹಿರೇಕಾನವಂಗಲ ಗ್ರಾಮದಲ್ಲಿ ಪಡಿತರ ವಿತರಣೆ ಕೇಂದ್ರ ತೆರೆಯುವ ಚಿಂತನೆ ಇದೆ ಎಂದರು.
ನಿರ್ದೇಶಕ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಸಂಘದ ಪ್ರತಿಯೊಬ್ಬ ಸದಸ್ಯ ಸಹಕಾರಿ ತತ್ವ ಸಿದ್ಧಾಂತ ಅರಿತು ಮುನ್ನಡೆದರೆ ಸಹಕಾರ ಕ್ಷೇತ್ರ ಗಟ್ಟಿಗೊಳ್ಳುವುದಲ್ಲದೇ, ಪ್ರಗತಿ ಸುಲಭವಾಗಲಿದೆ ಎಂದರು. ಉಪಾಧ್ಯಕ್ಷ ಯೋಗೇಶ್, ನಿರ್ದೇಶಕರಾದ ರೇಣುಕಪ್ಪ, ಜಯಪ್ಪ, ಎಂ.ಭೈರಪ್ಪ, ತಿಮ್ಮಪ್ಪ, ಚಂದ್ರಪ್ಪ, ಬೇಲೂರುನಾಯ್ಕ, ಸೋಮಣ್ಣ, ಸರೋಜಮ್ಮ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸತೀಶ್, ಸಿಇಒ ದೇವರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net