ಸುಂಕದಕಟ್ಟೆ ನರಸಿಂಹಸ್ವಾಮಿ ರಥೋತ್ಸವ ಸಂಭ್ರಮ

HNL Sunkadakatte march 10_1
Published on

ದಾವಣಗೆರೆ: ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಶ್ರೀ ನರಸಿಂಹಸ್ವಾಮಿ ದೊಡ್ಡ ರಥೋತ್ಸವ ಶುಕ್ರವಾರ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಂಭ್ರಮದಿಂದ ರಥೋತ್ಸವ ನೆರವೇರಿತು.

ಸಾವಿರಾರು ಭಕ್ತರು ರಥದ ಕಳಸಕ್ಕೆ ಮಂಡಕ್ಕಿ, ಮೆಣಸಿನಕಾಳು, ಬಾಳೆಹಣ್ಣು, ಬಾಳೆಹಣ್ಣುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವಕ್ಕೂ ಮೊದಲು ಮಂಗಳವಾರ ರಾತ್ರಿ ಕಂಕಣಧಾರಣೆ, ಗುರುವಾರ ಬೆಳಗ್ಗೆ ಹೂವಿನ ಉಚ್ಛಾಯ ನಡೆಯಿತು.

ಶುಕ್ರವಾರ ಸಂಜೆ ಓಕಳಿ ಮತ್ತು ಮಣೇವು (ಭೂತನ ಸೇವೆ) ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನದ ನೂತನ ರಾಜಗೋಪುರ ಸಾವಿರಾರು ಭಕ್ತರ ಕಣ್ಮನ ಸೆಳೆಯಿತು. ಅನ್ನ ದಾಸೋಹ ಏರ್ಪಡಿಸಲಾಗಿತ್ತು.

ಬೆಲ್ಲದ ಪಾನಕ ವಿಶೇಷ: ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಕಡೆಗಳಿಂದ ಜನರು ಎತ್ತಿನ ಬಂಡಿಗಳಲ್ಲಿ ಬೆಲ್ಲದ ಪಾನಕದ ಹಂಡೇವುಗಳನ್ನು ತುಂಬಿಕೊಂಡು ಬರುವುದು ಈ ಕ್ಷೇತ್ರದ ವಾಡಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net