ವಾಸವಿ ಜಯಂತಿ ನಿಮಿತ್ತ ರಥೋತ್ಸವ

18-05-Shiva-1
ರಾಯಚೂರಿನ ನಗರೇಶ್ವರ ದೇವಸ್ಥಾನದಲ್ಲಿ ವಾಸವಿ ಜಯಂತಿ ನಿಮಿತ್ತ ಶನಿವಾರ ಚಿನ್ನದ ರಥೋತ್ಸವ ನೆರವೇರಿಸಲಾಯಿತು. ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ, ಮುಖಂಡರಾದ ಸಿ.ಪದ್ಮರಾಜ, ಶ್ರೀನಿವಾಸ ಜಟ್ರಂ, ಜಗದೀಶ ಗುಪ್ತಾ, ಬಿ.ಗೋವಿಂದ, ಕೆ.ಭೀಮಾಶಂಕರ, ಕೆ.ಸಿ.ವೀರೇಶ ಇದ್ದರು.
Published on

ರಾಯಚೂರು: ನಗರದ ನಗರೇಶ್ವರ ದೇವಸ್ಥಾನದಲ್ಲಿ ವಾಸವಿ ಜಯಂತಿ ಅಂಗವಾಗಿ ಶನಿವಾರ ಹೋಮ, ವಿಶೇಷ ಪೂಜೆ ಹಾಗೂ ರಥೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ ವಾಸವಿ ಮೂರ್ತಿಗೆ ಪಂಚಾಮೃತ ಅಭಿಷೇಕ, ವಾಸವಿ ಹೋಮ, ಸಾಮೂಹಿಕ ಕುಂಕುಮಾರ್ಚನೆ, ವಾಸವಿ ಪಾರಾಯಣ ನಡೆಸಲಾಯಿತು. ನಂತರದಲ್ಲಿ ಪಲ್ಲಕ್ಕಿ ಉತ್ಸವ ನೆರೆವೇರಿಸಿ ದೇವಸ್ಥಾನದ ಪ್ರಾಕಾರದಲ್ಲಿ ವಾಸವಿ ಮೂರ್ತಿಯನ್ನಿಟ್ಟು ಚಿನ್ನದ ರಥೋತ್ಸವ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ, ಮುಖಂಡರಾದ ಸಿ.ಪದ್ಮರಾಜ, ಶ್ರೀನಿವಾಸ ಜಟ್ರಂ, ಜಗದೀಶ ಗುಪ್ತಾ, ಬಿ.ಗೋವಿಂದ, ಕೆ.ಭೀಮಾಶಂಕರ, ಕೆ.ಸಿ.ವೀರೇಶ ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net