೧೨ ರಂದು ಶ್ರೀ ಕಾಳಿಕಾದೇವಿಯ ರಥೋತ್ಸವ

BHANGI NARASAREDDYA
BHANGI NARASAREDDYA
Published on

ರಾಯಚೂರು: ಮುನ್ನೂರು ಕಾಪು ಸಮಾಜದ ವತಿಯಿಂದ -É.೧೨ ರಂದು ಶ್ರೀ ಲಕ್ಷ್ಮೀಮ್ಮದೇವಿ ಹಾಗೂ ಶ್ರೀ ಕಾಳಿಕಾದೇವಿಯ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಂದು ಸಮಾಜದ ಯುವ ಘಟಕದ ಅಧ್ಯಕ್ಷ ಭಂಗಿ ನರಸರೆಡ್ಡಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿನ ಮಾತನಾಡಿ, ಅಂದು ಮಧ್ಯಾಹ್ನ ೧:೩೦ ಕ್ಕೆ ಭಕ್ತರಿಗಾಗಿ ಪ್ರಸಾದ ಮತ್ತು ಔತಣ ಕೂಟವನ್ನು ನಗರದ ಶ್ರೀ ಲಕ್ಷ್ಮೀಮ್ಮದೇವಿ ಮತ್ತು ಕಾಳಿಕಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಂಜೆ ೪:೩೦ ಕ್ಕೆ ಮಹಾ ರಥೋತ್ಸವ ಜರುಗಲಿದೆ ಸಾವಿರಾರು ಸಂಖ್ಯೆಯಲ್ಲಿ ಭಕ್ರು ಆಗಮಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹೇಂದ್ರರೆಡ್ಡಿ, ಎನ್. ಶ್ರೀನಿವಾಸರೆಡ್ಡಿ, ಚಂದ್ರಶೇಖರರೆಡ್ಡಿ, ಯು. ಗೋವಿಂದರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net