ಶಿವಶಂಕರಿ ಅಮ್ಮನವರ ರಥೋತ್ಸವ

23 BIRUR 01
ಶ್ರೀ ಶಿವಶಂಕರಿ ಅಮ್ಮನವರ ಉತ್ಸವ ಮೂರ್ತಿ.
Published on

ಬೀರೂರು: ಚೌಳಹಿರಿಯೂರು ಹೋಬಳಿ ಹಿರೇಬಳ್ಳೇಕೆರೆ ಗ್ರಾಮದ ಶ್ರೀ ಶಿವಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವ 25 ರಂದು ವಿಜೃಂಭಣೆಯಿಂದ ನಡೆಯಲಿದೆ.
ಇಂದಿನಿಂದ ಆರಂಭವಾಗುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಶಿವಶಂಕರಿ ಅಮ್ಮ, ಚಿಕ್ಕಮ್ಮ ದೊಡ್ಡಮ್ಮನವರ ರಥೋತ್ಸವ ಹಾಗೂ ಕೆಂಡಾರ್ಚನೆ ಪಿ.ಕೋಡಿಹಳ್ಳಿಯ ಶ್ರೀ ವೀರಭದ್ರೇಶ್ವರ, ಶ್ರೀಬನಶಂಕರಿದೇವಿ ಹಾಗೂ ಹುರುಕನಹಳ್ಳಿ ಶ್ರೀ ಚೌಡೇಶ್ವರಿ ಅಮ್ಮನವರ ಸಮ್ಮುಖದಲ್ಲಿ ಜರುಗಲಿದೆ.
ಭಾನುವಾರ ಬೆಳಗ್ಗೆ ದ್ವಜಾರೋಹಣ ಗ್ರಾಮದ ಪವಿತ್ರ ಕಲ್ಲುಬಾವಿ ಸ್ಥಾನದಲ್ಲಿ ಹೊಳಪೂಜೆ, ಕಲಶಾರೋಹಣ ಮತ್ತು ಮಧ್ಯಾಹ್ನ ಬ್ರಹ್ಮ ರಥೋತ್ಸವ ನಡೆಯಲಿದೆ. ರಾತ್ರಿ ಹಿರೇಬಳ್ಳೇಕೆರೆ ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಂಗಳವಾರ ಬೆಳಗ್ಗಿನ ರಥೋತ್ಸವ ಮತ್ತು ಮಹಾಮಂಗಳಾರತಿ 11 ಗಂಟೆಗೆ ಪಾನಕದ ಬಂಡಿ ಸಂಜೆ ಡ್ರಸೆಂಟ್‌ನೊಂದಿಗೆ ಕೆಂಡಾರ್ಚನೆ ಹಾಗೂ ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ. ಬುಧವಾರ ಓಕಳಿ ಉತ್ಸವ ಹಣ್ಣುಸೇವೆ ಮತ್ತು ಮಹಾಮಂಗಳಾರತಿ ಸಂಜೆ ಭೂತನ ಸೇವೆಯೊಂದಿಗೆ ಸಂಪನ್ನಗೊಳ್ಳುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net