

ಕೆರೂರ: ರಾಘವೇಂದ್ರ ಸ್ವಾಮಿಗಳ 352 ಆರಾಧನಾ ಮಹೋತ್ಸವದಂಗವಾಗಿ ಶನಿವಾರ ಪಟ್ಟಣದ ಕಿಲ್ಲಾ ಬಡಾವಣೆಯಲ್ಲಿರುವ ರಾಘವೇಂದ್ರ ಮಠದಲ್ಲಿ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಪಾರಾಯಣ, ರಾಯರ ಜಪವು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಮಧ್ಯಾಹ್ನ 1 ಗಂಟೆಗೆ ರಾಯರ ಮಠದಲ್ಲಿ ರಥೋತ್ಸವ ನಡೆಯಿತು. ರಥೋತ್ಸವವು ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾದರು.
ರಂಗನಾಥ ದೇಸಾಯಿ, ಕಾಶಿನಾಥ ಜೋಶಿ, ರಾಜಕುಮಾರ ದೇಸಾಯಿ, ಸುದೀಂದ್ರ ಕುಲಕರ್ಣಿ, ಮಹೇಶ ಕುಲಕರ್ಣಿ, ರವಿ ಜೋಶಿ, ಸುಮಾ ದೇಸಾಯಿ, ವಂದನಾ ನಿಂಬರಗಿ, ರಶ್ಮಿ ದೇಸಾಯಿ, ಅಂಜನಾ ಕುಲಕರ್ಣಿ, ರಕ್ಷಿತಾ ದೇಸಾಯಿ ಇದ್ದರು.