ಸಂಭ್ರಮದ ಮಹಾಂತ ಶಿವಯೋಗಿಗಳ ರಥೋತ್ಸವ

24 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜ ಹಾಗೂ ಮೌನಯೋಗಿ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಸಂಜೆ ಅಪಾರ ಭಕ್ತರ ಹಷೋರ್ದ್ಘಾರಗಳ ಮಧ್ಯೆ ಸಂಭ್ರಮದಿಂದ ಜರುಗಿತು.
ಮಧ್ಯಾಹ್ನ ಗ್ರಾಮದೇವಿಗೆ ಉಡಿ ತುಂಬುವ ಕಾರ್ಯಕ್ರಮದ ಬಳಿಕ ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಮಠದ ಧರ್ಮಾಧಿಕಾರಿ ಶ್ರೀ ಸಂಗಮೇಶ ಸ್ವಾಮೀಜಿ ಚಾಲನೆ ನೀಡಿದರು.
ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ನೆರೆದ ಭಕ್ತ ಸಮೂಹ ಬಾಳೆಹಣ್ಣು, ಕೊಬ್ಬರಿ, ಉತ್ತತ್ತಿಯನ್ನು ರಥದತ್ತ ಎಸೆಯುವ ಮೂಲಕ ತಮ್ಮ ಭಕ್ತಿಯ ಪಾರಮ್ಯ ಮೆರೆದರು. ಮಠದ ಟ್ರಸ್ಟ್​ ಕಮಿಟಿ ಅಧ್ಯ ಚಂದ್ರಗೌಡ ಪಾಟೀಲ, ಉಪಾಧ್ಯ ಈಶ್ವರ ಗಾಣಿಗೇರ, ಗ್ರಾಪಂ ಅಧ್ಯ ನಾಗೇಶ ಹಟ್ಟಿಹೊಳಿ, ಪಿಎಲ್​ಡಿ ಬ್ಯಾಂಕ್​ ಅಧ್ಯ ಬಸವಪ್ರಭು ಹುಂಬೇರಿ, ಹಿರಿಯರಾದ ಕರೆಪ್ಪ ಬಳಿಗೇರ, ಚನ್ನವಿರಗೌಡ ಪಾಟೀಲ, ಮಂಜುನಾಥ ತಿರ್ಲಾಪುರ, ಡಾಕಪ್ಪ ಮಂಜು ಈಳಿಗೇರ, ಶಂಕ್ರಪ್ಪ ದುಬ್ಬನಮರಡಿ, ಶಿವಪ್ಪ ತಿರ್ಲಾಪುರ, ಚನ್ನಪ್ಪ ತೇಗೂರ, ಬಸವರಾಜ ಪಮ್ಮಣ್ಣವರ, ನರೇಂದ್ರ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net