ಬಸ್ತಿ ಮಠದ ರಥೋತ್ಸವ ಆರಂಭ

nrp basthi
ಬಸ್ತಿಮಠದ ಪೀಠಾಧಿಪತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಮಠದ ಸಿಬ್ಬಂದಿ ಇದ್ದರು.
Published on

ಎನ್.ಆರ್.ಪುರ: ಬಸ್ತಿ ಮಠದಲ್ಲಿ 5 ದಿನಗಳ ಭಗವಾನ್ 1008 ಚಂದ್ರಪ್ರಭ ಸ್ವಾಮಿ ಹಾಗೂ ಶ್ರೀ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ರಥೋತ್ಸವ ಭಾನುವಾರ ಪ್ರಾರಂಭವಾಗಿದ್ದು, ಮಠದ ಪೀಠಾಧಿಪತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬೆಳಗ್ಗೆ ಇಂದ್ರ ಪ್ರತಿಷ್ಠೆ, ವಿಮಾನ ಶುದ್ಧಿ, ಯಕ್ಷ ಪ್ರತಿಷ್ಠ, ಧ್ವಜಾರೋಹಣ, ಶ್ರೀ ಜ್ವಾಲಾಮಾಲಿನಿ ಅಮ್ಮನವರಿಗೆ ಉಯ್ಯಲೆ ಸೇವೆ, ಮಹಾ ನೈವೇದ್ಯ ಪೂಜೆ, ನಾಂದಿ ಮಂಗಲ, ವಾಸ್ತು ಶಾಂತಿ ಮೃತ್ತಿಕಾ ಸಂಗ್ರಹಣಾ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಏ.1ರಂದು ಶ್ರೀ ವಜ್ರಪಂಜರ ಆರಾಧನೆ, ಶ್ರೀ ಪೀಠ ಯಂತ್ರಾರಾಧನೆ, ಶ್ರೀ ಜ್ವಾಲಾಮಾಲಿನಿ ಅಮ್ಮನವರಿಗೆ ಉಯ್ಯಲೆ ಸೇವೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net