ಗುರು ಪರದೇಶಪ್ಪ ಮಠದಲ್ಲಿ ರಥೋತ್ಸವ

rathostava
ಖಾಂಡ್ಯ ಹೋಬಳಿ ಬೊಗಸೆ ಗುರುಪರದೇಶಪ್ಪ ಮಠದಲ್ಲಿ ಸಿದ್ದೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆ ಅಂಗವಾಗಿ ಮಹಾರಥೋತ್ಸವ ನಡೆಯಿತು.
Published on

ಬಾಳೆಹೊನ್ನೂರು: ಖಾಂಡ್ಯ ಹೋಬಳಿ ಬೊಗಸೆ ಗ್ರಾಮದ ಭದ್ರಾ ಅಭಯಾರಣ್ಯದ ನಡುವೆ ಇರುವ ಗುರುಪರದೇಶಪ್ಪ ಮಠದಲ್ಲಿ ಸಿದ್ದೇಶ್ವರಸ್ವಾಮಿ ಹಾಗೂ ಪರಿವಾರ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ಮಂಗಳವಾರ ಸಡಗರದಿಂದ ನಡೆಯಿತು.
ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಗಂಗಾಸ್ನಾನ, ಹರಕೆ ಅರ್ಪಣೆ, ಕೆಂಡಾರ್ಚನೆ ಜರುಗಿತು. ಮಂಗಳವಾರ ಸಿದ್ದೇಶ್ವರ ಸ್ವಾಮಿ ಉತ್ಸವ ವಿಗ್ರಹವನ್ನು ಮಹಾರಥದಲ್ಲಿ ಕುಳ್ಳಿರಿಸಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ರಥೋತ್ಸವ ಮಾಡಲಾಯಿತು. ಕೆಂಡಾರ್ಚನೆಯಲ್ಲಿ ಸಾವಿರಾರು ಭಕ್ತರು ಕೊಂಡ ಹಾಯ್ದು ಭಕ್ತಿ ಸಮರ್ಪಿಸಿದರು. ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಹಳ್ಳಿಯ ಭಕ್ತರು ವಿವಿಧ ದೇವರ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಬಂದು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಶಾಸಕ ಟಿ.ಡಿ.ರಾಜೇಗೌಡ, ದೇವಸ್ಥಾನದ ಧರ್ಮಾಧಿಕಾರಿ ಮಧುಕುಮಾರ್ ಶಾಸಿ, ಕಾಫಿ ಬೆಳೆಗಾರ ಬಾಸಾಪುರ ಬೋಜೇಗೌಡ, ವಿಶ್ವ ಹಿಂದು ಪರಿಷತ್ತಿನ ಶಿವಶಂಕರ್, ಜಿಪಂ ಮಾಜಿ ಸದಸ್ಯೆ ಕವಿತಾ ಲಿಂಗರಾಜು, ಶಶಿಧರ್, ಮುದರ ಪೂಜಾರಿ, ಬಿದರೆ ರಘುಪತಿ ಪ್ರಮುಖರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net