ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ

Rathothsava
Published on

ನುಗ್ಗೇಹಳ್ಳಿ: ಹೋಬಳಿ ಕೇಂದ್ರ ನುಗ್ಗೇಹಳ್ಳಿ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಸೋಮವಾರ ನೆರವೇರಿತು. ಬೆಳಗ್ಗೆ ಮೂಲ ದೇವರಿಗೆ ಅಭಿಷೇಕ, ಸೂರ್ಯ ಮಂಡಲ ಉತ್ಸವ, ಕೃಷ್ಣ ಗಂಧೋತ್ಸವ ರಥಕ್ಕೆ ಮಹಾ ನೈವೇದ್ಯ ಹೂವಿನ ಅಲಂಕಾರ ನೆರವೇರಿತು.
ಅಭಿಜಿನ್ ಮುಹೂರ್ತದಲ್ಲಿ ರಥೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಸುತ್ತ ಮುತ್ತಲ ಗ್ರಾಮದ ನೂರಾರು ಭಕ್ತರು ಪೂಜೆ ಸಲ್ಲಿಸಿ ರಥಕ್ಕೆ ದವನ, ಹಣ್ಣು -ಕಾಯಿ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಅನ್ನದಾಸೋಹ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯ ಜಗದೀಶ್, ಸಮಿತಿ ಅಧ್ಯಕ್ಷೆ ಛಾಯಾಮಣಿ, ಆಗಮಿಕ ಅರ್ಚಕರಾದ ರಾಮಸ್ವಾಮಿ, ಶ್ರೀಧರ್, ಜಗನ್ನಾಥ್, ಪ್ರಸನ್ನ ಕೇಶವಚಾರ್, ರಾಜು, ಮುಖಂಡ ರಾದ ಜೈದೀಪ್, ಎನ್. ಪಿ. ಕೃಷ್ಣೇಗೌಡ, ಉದ್ಯಮಿ ಎನ್.ಎನ್. ನಾಗರಾಜು, ಲಕ್ಷ್ಮಣ್, ಪ್ರಕಾಶ್, ಗ್ರಾಮ ಪಂಚಾಯತಿ ಸದಸ್ಯರುಗಳಾದ ಹೊನ್ನೇಗೌಡ, ಕಿರಣ್, ಗೌಡಕಿ ಮಂಜುನಾಥ್, ವಿಶ್ವನಾಥ್, ಎಂ. ನಾಗರಾಜ್, ಜಿತೇಂದ್ರ, ಶಿವಲಿಂಗೇಗೌಡ, ಸಿ. ಬಿ. ಶಂಕರ್, ಬೀಡಾ ದೊರೆಸ್ವಾಮಿ, ಶಶಿಕಲಾ ದೇವರಾಜ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net