ವಿವಿಧೆಡೆ ರಥಸಪ್ತಮಿಯ ಪುಣ್ಯಸ್ನಾನ

05-,kkr2(2-25
Published on

ಕಿಕ್ಕೇರಿ : ರಥಸಪ್ತಮಿ ಅಂಗವಾಗಿ ಬುಧವಾರ ಮುಂಜಾನೆ ಇಲ್ಲಿನ ಅಮಾನಿಕೆರೆ, ಹತ್ತಿರದ ಮಂದಗೆರೆಯ ಹೇಮಾವತಿ ನದಿ, ಮಾದಾಪುರದ ಪಶ್ಚಿಮವಾಹಿನಿ ತಟದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ಧನ್ಯತೆ ಮೆರೆದರು.

ಬಿಳಿ ಎಕ್ಕದ ಎಲೆಗಳನ್ನು ದೇಹದ ಮೇಲೆ ಇರಿಸಿಕೊಂಡು ಸೂರ್ಯದೇವನನ್ನು ನೆನೆದು ನದಿ- ಕೆರೆಗಳಲ್ಲಿ ಮಿಂದರು. ಗಂಗೆಯ ಸ್ವರೂಪವಾದ ಜಲವನ್ನು ಪೂಜಿಸಿ, ವಿಷ್ಣು ದೇಗುಲಕ್ಕೆ ತೆರಳಿ ಇಷ್ಟಾರ್ಥಕ್ಕೆ ಪ್ರಾರ್ಥಿಸಿದರು. ಸಾಸಲು ಗ್ರಾಮದಲ್ಲಿ ಸೋಮೇಶ್ವರ ಪುಷ್ಕರಿಣಿಯಲ್ಲಿ ಬುಧವಾರ ಮುಂಜಾನೆ ಹಲವರು ಪುಣ್ಯಸ್ನಾನ ಮಾಡಿ ಸೋಮೇಶ್ವರ, ಶಂಭುಲಿಂಗೇಶ್ವರ ದೇವರ ದರ್ಶನ ಪಡೆದರು. ಬೇವಿನಹಳ್ಳಿಯ ಶ್ರೀ ಅಂಕನಾಥೇಶ್ವರ, ಕಿಕ್ಕೇರಿಯ ಶ್ರೀ ಬ್ರಹ್ಮೇಶ್ವರ, ಶ್ರೀ ನರಸಿಂಹಸ್ವಾಮಿ, ಮಹಾ ಲಕ್ಷ್ಮೀದೇವಿ, ಕೃಷ್ಣಾಪುರದ ಚಲುವನಾರಾಯಣಸ್ವಾಮಿ, ಗೂಡೆಹೊಸಹಳ್ಳಿ ಶ್ರೀನಿವಾಸ ಮತ್ತಿತರ ದೇಗುಲಗಳಲ್ಲಿ ವಿಶೇಷ ಪೂಜೆಗಳು ಈ ಸಂದರ್ಭ ನೆರವೇರಿದವು. ಬುಧವಾರ ಮುಂಜಾನೆ ಯೋಗಸಕ್ತರು ಸಂಭ್ರಮದಿಂದ ಸೂರ್ಯನಮಸ್ಕಾರವನ್ನು ಮಾಡಿ ಭಾಸ್ಕರನಿಗೆ ಸಮರ್ಪಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net