ರಥಸಪ್ತಮಿ ಸಂಭ್ರಮ

17-kkr1(2-24
Published on

ಕಿಕ್ಕೇರಿ : ಹೋಬಳಿಯಾದ್ಯಂತ ರಥಸಪ್ತಮಿ ಪೂಜೆ ಸಂಭ್ರಮ ಮತ್ತು ಸಡಗರದಿಂದ ನೆರವೇರಿತು. ವಿಷ್ಣು ದೇಗುಲಗಳಲ್ಲಿ ಶುಕ್ರವಾರ ಪೂಜೆ ನಿಮಿತತ ಹೆಚ್ಚಿನ ಭಕ್ತರು ಕಂಡು ಬಂದರು. ಪ್ರತಿ ಗ್ರಾಮಗಳಲ್ಲಿರುವ ಮಾರುತಿ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿತು. ಶ್ರೀ ನರಸಿಂಹಸ್ವಾಮಿ ದೇಗುಲ, ಗೋವಿಂದನಹಳ್ಳಿ ವೇಣುಗೋಪಾಲಸ್ವಾಮಿ, ಗೂಡೆಹೊಸಹಳ್ಳಿ ಶ್ರೀ ನಿವಾಸ ದೇಗುಲ, ಗದ್ದೆಹೊಸೂರು ಅಭಯ ವೆಂಕಟೇಶ್ವರ, ಶ್ರೀನಿವಾಸ ದೇವರಿಗೆ ವಿವಿಧ ಪರಿಮಳ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅರ್ಕದ 7ಎಲೆ (ಎಕ್ಕದ ಎಲೆ)ಗಳನ್ನು ಶರೀರದ ಮೇಲೆ ಇಟ್ಟುಕೊಂಡು ಸ್ನಾನ ಮಾಡಿ ಭಾಸ್ಕರನಿಗೆ ಭಕ್ತರು ನಮಿಸಿದರು. ಹಲವರು ಹೇಮಾವತಿ ನದಿಗೆ ತೆರಳಿ ಎಕ್ಕದ ಎಲೆಯೊಂದಿಗೆ ಪುಣ್ಯಸ್ನಾನ ಮಾಡಿ ಸೂರ್ಯದೇವರಿಗೆ ಅರ್ಘ್ಯ ಸಮರ್ಪಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net