ಶ್ರೀ ಅಗಸ್ತ್ಯೇಶ್ವರ ರಥೋತ್ಸವ ಸಂಪನ್ನ

9ark3
Published on

ಅರಕಲಗೂಡು : ತಾಲೂಕಿನ ರಾಮನಾಥಪುರದ ಕಾವೇರಿ ನದಿ ದಂಡೆ ಮೇಲಿರುವ ಐತಿಹಾಸಿಕ ಶ್ರೀ ಅಗಸ್ತ್ಯೇಶ್ವರ ದೇವಾಲಯದ
ರಥೋತ್ಸವ ಶನಿವಾರ ಶ್ರದ್ಧಾ ಭಕ್ತಿಯಿಂದ ಜರುಗಿತು. ದೇವಾಲಯದ ಮೂಲ ವಿಗ್ರಹಕ್ಕೆ ಬೆಳಗ್ಗೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಲಾಯಿತು. ಮಧ್ಯಾಹ್ನ ಶುಭ ಮುಹೂರ್ತದಲ್ಲಿ ದೇವರ ಉತ್ಸವ ಮೂರ್ತಿಯನ್ನು ಕರೆತಂದು ಅಲಂಕೃತರ ರಥದ ಮೇಲೆ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ನೆರೆದಿದ್ದ ಭಕ್ತರು ತೇರು ಎಳೆದು ಧನ್ಯತೆ ಮೆರೆದರು.
ರಥ ಬೀದಿಯಲ್ಲಿ ತೇರು ಮುಂದೆ ಸಾಗುತ್ತಿದ್ದಾಗ ಭಕ್ತರು ಈಡುಗಾಯಿ ಒಡೆದು ಭಕ್ತಿ ಸಮರ್ಪಿಸಿದರು. ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿದ್ದು ಭಕ್ತಿ ಭಾವದ ಪ್ರತೀಕವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net