ರಥಯಾತ್ರೆಗೆ ನೀಡಿದ ಹಣಕ್ಕೆ ರಶೀದಿ ನೀಡದ ವ್ಯಕ್ತಿ ವಿರುದ್ಧ ದೂರು

Crime Logo
Published on

ರಾಣೆಬೆನ್ನೂರ: ಸಿದ್ಧಾರೂಢರ ಜ್ಯೋತಿ ರಥಯಾತ್ರೆ ಬಂದಾಗ ನೀಡಿದ ಹಣಕ್ಕೆ ರಶೀದಿ ಕೊಡದ ವ್ಯಕ್ತಿಯ ವಿರುದ್ಧ ಇಲ್ಲಿಯ ಶಹರ ಪೊಲೀಸ್​ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ತಾಲೂಕಿನ ಹಿರೇಬಿದರಿ ಗ್ರಾಮದ ಸಿದ್ದನಗೌಡ ಪ್ರಭುಗೌಡ ಪಾಟೀಲ ಎಂಬುವನ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಲೂಕಿನ ಮುಷ್ಟೂರು ಗ್ರಾಮದ ಅರುಣಕುಮಾರ ಯಲ್ಲಕ್ಕನವರ ಎಂಬುವರು ದೂರು ನೀಡಿದ್ದಾರೆ. ಶಿವರಾತ್ರಿ ಸಮಯದಲ್ಲಿ ಶ್ರೀ ಸಿದ್ಧಾರೂಢ ಜ್ಯೋತಿ ರಥಯಾತ್ರೆ ನಗರಕ್ಕೆ ಆಗಮಿಸಿತ್ತು. ಈ ಸಮಯದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಸಿದ್ದನಗೌಡನಿಗೆ ಕೊಡಲಾಗಿತ್ತು. ಆದರೆ, ಹಣ ಕೊಟ್ಟಿದ್ದಕ್ಕೆ ರಶೀದಿ ಕೇಳಿದರೆ ಇಂದು ನಾಳೆ ಎಂದು ಸತಾಯಿಸುತ್ತ ಬಂದಿದ್ದಾನೆ. ಅಲ್ಲದೆ ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಅಜಿರ್ ಮಾಡಿದ್ದರಿಂದ ಸಿದ್ದನಗೌಡ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net