ಡೆಂಘೆ ಜ್ವರ ಪತ್ತೆ ಪರೀಕ್ಷೆಗೆ ದರ ನಿಗದಿ: ಹೆಚ್ಚಿನ ಶುಲ್ಕ ಪಡೆದಲ್ಲಿ ದೂರು ಸಲ್ಲಿಸಿ

denge_20240718001455539.jpg
Published on

ಮಂಡ್ಯ: ಜಿಲ್ಲೆಯಲ್ಲಿ ಡೆಂಘೆ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ನರ್ಸಿಂಗ್ ಹೋಂ/ಆಸ್ಪತ್ರೆ/ಡಯಾಗ್ನೋಸ್ಟಿಕ್ ಸೆಂಟರ್/ಲ್ಯಾಬ್ಗಳಲ್ಲಿ ಜ್ವರ ಪತ್ತೆ ಹಚ್ಚುವ ಪರೀಕ್ಷೆಗಳಾದ ಎಲಿಸಾ ಹಾಗೂ ರ‌್ಯಾಪಿಡ್ ಟೆಸ್ಟ್‌ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದರವನ್ನು ನಿಗದಿಪಡಿಸಿದೆ.

ಎಲಿಸಾ ಎನ್‌ಎಸ್1 ಪರೀಕ್ಷೆಗೆ 300 ರೂ, ಎಲಿಸಾ ಐಜಿಮ್ ಪರೀಕ್ಷೆಗೆ 300 ರೂ, ರ‌್ಯಾಪಿಡ್ ಎನ್‌ಎಸ್1 ಐಜಿಮ್ ಮತ್ತು ಐಜಿಜಿ ಪರೀಕ್ಷೆಗೆ 250 ರೂ ನಿಗದಿ ಮಾಡಲಾಗಿದೆ. ಇದಕ್ಕಿಂತ ಹೆಚ್ಚಿನ ದರವನ್ನು ಪಡೆದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳ ಮೊ.ಸಂ 9449843445 ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಮೊ.ಸಂ 9880151245 ಯನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಡಿಎಚ್‌ಒ ಡಾ.ಕೆ.ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net