ಶೇ.5 ಜಿಎಸ್‌ಟಿ ಹೆಚ್ಚಳ; ದ.ಕ-ಉಡುಪಿಯಲ್ಲಿ ನಾಳೆಯಿಂದ ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ದರ ಏರಿಕೆ

mosaru
Published on

ಮಂಗಳೂರು: ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ ಜು.13ರಂದು ಮೊಸರು, ಮಜ್ಜಿಗೆ ಹಾಗೂ ಲಸ್ಸಿಗಳ ಮೇಲೆ ಶೇ.5 ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜು.18ರಿಂದ ಅನ್ವಯವಾಗುವಂತೆ ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ದರ ಹೆಚ್ಚಳವಾಗಲಿದೆ. ಮೊಸರು (200 ಗ್ರಾಂ) 13 ರೂ., ಮೊಸರು (415 ಗ್ರಾಂ) 23 ರೂ., ಮೊಸರು(1ಲೀ.) 47 ರೂ., ಮೊಸರು(6 ಕೆ.ಜಿ) 279 ರೂ., ಮಜ್ಜಿಗೆ (200 ಗ್ರಾಂ) 8 ರೂ., ಸಾದಾ ಮಜ್ಜಿಗೆ (500 ಗ್ರಾಂ) 20 ರೂ., ಸಿಹಿ ಲಸ್ಸಿ (200 ಗ್ರಾಂ) 13 ರೂ.ನಂತೆ ಗರಿಷ್ಠ ಮಾರಾಟ ದರವನ್ನು ಪರಿಷ್ಕರಿಸಲಾಗಿದೆ. ನಂದಿನಿ ಗ್ರಾಹಕರು ಹಾಗೂ ಅಧಿಕೃತ ಮಾರಾಟಗಾರರು ಸಹಕರಿಸುವಂತೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net