ಗಜಾನನ ಉತ್ಸವ ಸಮಿತಿ ಅಧ್ಯಕ್ಷರಾಗಿ ರತನ ಆಯ್ಕೆ

New Ratana New159
Published on

ಹುಬ್ಬಳ್ಳಿ : ಇಡೀ ರಾಜ್ಯದಲ್ಲಿಯೇ ಹುಬ್ಬಳ್ಳಿ ಕಾ ರಾಜಾ ಎಂದು ಪ್ರಸಿದ್ಧಿ ಪಡೆದಿರುವ ನಗರದ ದಾಜಿಬಾನ ಪೇಟೆಯ ಶ್ರೀ ಗಜಾನನ ಉತ್ಸವ ಸಮಿತಿಗೆ ನೂತನ ಅಧ್ಯಕ್ಷರಾಗಿ ಮಂಜುನಾಥ ಪಾಂಡುರಂಗಸಾ ರತನ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಜು. 11ರಂದು ದಾಜಿಬಾನ ಪೇಟೆಯ ಶ್ರೀ ಗಣಪತಿ ದೇವಸ್ಥಾನದಲ್ಲಿ ನಡೆದ ಸರ್ವಸಾಧಾರಣ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ಜರುಗಿತು. ಮಾಜಿ ಅಧ್ಯಕ್ಷ ಪಾಂಡುರಂಗಸಾ ಮೆಹರವಾಡೆ ಅವರನ್ನು ಸಮಿತಿಗೆ ಗೌರವ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರನ್ನಾಗಿ ಮೋಹನ ಏಕಬೋಟೆ, ಗಿರೀಶ ಮೆಹರವಾಡೆ, ಗೌರವ ಕಾರ್ಯದರ್ಶಿಯಾಗಿ ಜಯದೇವ ಪವಾರ, ಕೋಶಾಧಿಕಾರಿಯಾಗಿ ಸಂಜಯ ಮೇಹರವಾಡೆ, ಸಹ ಕೋಶಾಧಿಕಾರಿಯಾಗಿ ರಾಜು ಪವಾರ, ಸದಸ್ಯರಾಗಿ ಶ್ರೀನಿವಾಸ ರತನ, ವಿಜಯ ಪವಾರ, ಮನೋಜ ರತನ, ಮಂಜುನಾಥ ರತನ, ಪವನ ಪವಾರ, ಕಿಶೋರ ರತನ, ವೆಂಕಟೇಶ ಕಲಬುರ್ಗಿ, ಸುನಿಲ ಮಿಸ್ಕಿನ, ಗುರುರಾಜ ಕಲಬುರ್ಗಿ, ಅಮಿತ್ ರತನ, ಅಮಿತ ಕಲ್ಬುರ್ಗಿ ನೇಮಕಗೊಂಡಿದ್ದಾರೆ.

ಎಸ್​ಎಸ್​ಕೆ ಸಮಾಜದ ಉಪ ಮುಖ್ಯ ಧರ್ಮದರ್ಶಿ ಭಾಸ್ಕರ ಜಿತೂರಿ ಅತಿಥಿಯಾಗಿದ್ದರು. ಶ್ರೀ ಗಣಪತಿ ದೇವಸ್ಥಾನದ ಅಧ್ಯಕ್ಷ ನಾಗೇಂದ್ರಸಾ ಮೆಹರವಾಡೆ ಅಧ್ಯಕ್ಷತೆ ವಹಿಸಿದ್ದರು. ದಾಜಿಬಾನಪೇಟೆ ಹಿರಿಯರಾದ ಆರ್.ಡಿ.ರತನ, ದಾಜಿಬಾನ ಪೇಟೆಯ ವ್ಯಾಪಾರಸ್ಥರು, ಯುವಕರು, ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net