ಕಾರ್ಯದರ್ಶಿಯಾಗಿ ರತನ್ ತಮ್ಮಯ್ಯ ನೇಮಕ

rathan thammaiah
Published on

ಮಡಿಕೇರಿ: ರೋಟರಿ ಜಿಲ್ಲೆ ೩೧೮೧ನ ಜಿಲ್ಲಾ ಯೋಜನಾ ಕಾರ್ಯದರ್ಶಿಯಾಗಿ ಮಡಿಕೇರಿ ರೋಟರಿ ಸಂಸ್ಥೆಯ ಕಿರಿಯಮಾಡ ರತನ್ ತಮ್ಮಯ್ಯ ನೇಮಕಗೊಂಡಿದ್ದಾರೆ.

ಕೊಡಗು, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಿಗೊಳಪಡುವ ೮೭ ರೋಟರಿ ಸಂಸ್ಥೆಗಳಿಗೆ ಜಿಲ್ಲಾ ಯೋಜನಾ ಕಾರ್ಯದರ್ಶಿಯಾಗಿ ರತನ್ ತಮ್ಮಯ್ಯ ಅವರನ್ನು ಜು.೧ ರಿಂದ ಜಾರಿಗೆ ಬರುವಂತೆ ಮುಂದಿನ ಸಾಲಿನ ರೋಟರಿ ಅವಧಿಗೆ ಆಯ್ಕೆ ಮಾಡಿ ಮುಂದಿನ ಅವಧಿಯ ರೋಟರಿ ಜಿಲ್ಲಾ ಗವರ್ನರ್ ರಾಮ್ಕಿ ನೇಮಕಾತಿ ನೀಡಿದ್ದಾರೆ.

ಮಡಿಕೇರಿ ರೋಟರಿ ಸಂಸ್ಥೆಯಲ್ಲಿ ಅಧ್ಯಕ್ಷ, ವಲಯ ಸೇನಾನಿ, ರೋಟರಿ ವಲಯ ೬ರ ಸಹಾಯಕ ಗವರ್ನರ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ರತನ್ ತಮ್ಮಯ್ಯ ಮುಂದಿನ ರೋಟರಿ ಅವಧಿಗೆ ಸಂಧ್ಯಾ ಸುರಕ್ಷ, ಅಂಗನವಾಡಿಗಳಿಗೆ ಕಾಯಕಲ್ಪ, ರಕ್ತದಾನ ಅಭಿಯಾನ, ಮಹಿಳೆಯರ ಸ್ವಾವಲಂಭಿ ಜೀವನಕ್ಕಾಗಿ ಸ್ವಾವಲಂಭಿ ಸ್ತ್ರೀ, ಸರ್ಕಾರಿ ಶಾಲಾ ಮಕ್ಕಳಿಗೆ ಪ್ರೋತ್ಸಾಹ ಸೇರಿದಂತೆ ೧೧ ವಿವಿಧ ಯೋಜನೆಗಳನ್ನು ರೋಟರಿ ಸಂಸ್ಥೆಗಳು ಅನುಷ್ಟಾನಗೊಳಿಸುವ ಹೊಣೆ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net