ಜನರ ಕಲ್ಯಾಣಕ್ಕಾಗಿ ಶ್ರಮಿಸಿದ ಭಾರತ ಮಾತೆ ಪುತ್ರ ರತನ್ ಟಾಟಾ

Ratan Tata, Shraddhanjali, Eranna Pattanashetty, Basavanbagewadi, Rashtriya Basavasainya,
ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಶಂಕರಗೌಡ ಬಿರಾದಾರ, ಮಹಾಂತೇಶ ಆದಿಗೊಂಡ ಇತರರಿದ್ದರು.
Published on

ಬಸವನಬಾಗೇವಾಡಿ: ಭಾರತದ ಹೆಮ್ಮೆಯ ಪುತ್ರ, ಮಧ್ಯಮ ವರ್ಗದ ಜನರ ಆಶಾ ಕಿರಣ, ಉದ್ಯಮದ ಜೊತೆಗೆ ದೇಶವಾಸಿಗಳ ಕಲ್ಯಾಣಕ್ಕಾಗಿ ಅಮೂಲ್ಯ ಕೊಡುಗೆಗಳನ್ನು ನೀಡಿದ ಕೊಡುಗೈ ದಾನಿ ರತನ್ ಟಾಟಾ ಅವರಾಗಿದ್ದರು ಎಂದು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ನಿವೃತ್ತ ಶಿಕ್ಷಕ ಮಹಾಂತೇಶ ಆದಿಗೊಂಡ ಮಾತನಾಡಿ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ ರತನ್ ಟಾಟಾ ಅವರಾಗಿದ್ದರು. ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಟಾಟಾ ಅವರು ಅಜರಾಮರವಾಗಿದ್ದಾರೆ ಎಂದರು.

ಇದೇ ವೇಳೆ ಶಾಸಕ ರಾಜುಗೌಡ ಪಾಟೀಲ ಅವರ ಮಾತೋಶ್ರೀ ನೀಲಮ್ಮಗೌಡತಿ ಪಾಟೀಲ ಅವರಿಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಂಗಣ್ಣ ಕಲ್ಲೂರ, ಬಸವರಾಜ ಕೋಟಿ, ಶೇಖರ ಗೊಳಸಂಗಿ, ಬಬಲಕಿಶೋರ ಅಗರವಾಲ, ಶೇಖರಗೌಡ ಪಾಟೀಲ, ಅನಿಲ ಅಗರವಾಲ, ರವಿ ರಾಠೋಡ, ಶಂಕರಗೌಡ ಪಾಟೀಲ, ಸಂಗಯ್ಯ ಕಾಳಹಸ್ತೇಶ್ವರಮಠ, ಶಿವನಗೌಡ ಗುಜಗೊಂಡ (ಮನಗೂಳಿ), ಸಂಕನಗೌಡ ಪಾಟೀಲ, ಸಂಗಮೇಶ ಪಟ್ಟಣಶೆಟ್ಟಿ, ಮಾಂತೇಶ ಹೆಬ್ಬಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net