

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ನುಡಿ ನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪ್ರಾಚಾರ್ಯ ಎಸ್.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ರತನ್ ಟಾಟಾ ಅವರು ಒಂದು ವ್ಯಕ್ತಿಯಲ್ಲ ಶಕ್ತಿ. ಭಾರತದ ಆರ್ಥಿಕ ರಂಗ ಚೇತರಿಕೆಗೆ ಅವರು ಕೊಟ್ಟ ಕೊಡುಗೆ ಅತ್ಯಧ್ಬುತ. ಗುಂಡಸೂಜಿಯಿಂದ ವಿಮಾನದವರೆಗೂ ಅವರ ಕಂಪನಿ ತಯಾರಿಸದ ಉತ್ಪನ್ನಗಳಿಲ್ಲ ಎಂದು ಸ್ಮರಿಸಿದರು.
ಪದವಿಪೂರ್ವ ಪ್ರಾಚಾರ್ಯ ಡಾ.ಡಿ.ಕೆ. ವಾಘ್ಮೋಡೆ ಮಾತನಾಡಿ, ರತನ್ ಟಾಟಾ ಅವರ ಸಾಧನೆಯನ್ನು ವಿದ್ಯಾರ್ಥಿಗಳು ಸದಾ ಸ್ಮರಿಸಬೇಕು ಎಂದರು.
ವಿಧ್ಯಾರ್ಥಿಗಳಾದ ಪೂಜಾ ಸುರಕೂಡ, ಸಂಜನಾ ಕುರ್ತಕೋಟಿ, ಬಸವರಾಜ ಮಜ್ಜಿಗುಡ್ಡಾ ಟಾಟಾರವರ ಕುರಿತು ಅನಿಸಿಕೆ ಹಂಚಿಕೊಂಡರು. ಡಾ. ಗೀತಾ ಕರಾಡೆ, ಡಾ. ಸೌಮ್ಯಶ್ರೀ ಹೆಗಡೆ ಇತರರು ಇದ್ದರು.
ಕೆ.ಎಸ್. ಶ್ರೀಷಾ ಪ್ರಾರ್ಥಿಸಿದರು. ಅನುಷಾ ಸಿರಿಗೇರಿ ವಂದಿಸಿದರು.