ಕೋಲ್‌ಗೇಟ್ ಬದಲು ಇಲಿ ಪಾಶಣದಿಂದ ಹಲ್ಲು ತಿಕ್ಕಿದ ವ್ಯಕ್ತಿ; ಚಿಕಿತ್ಸೆಗೆ ಸ್ಪಂದಿಸದೆ ಸಾವು

Crime Logo
Published on

ರಾಣೆಬೆನ್ನೂರ: ಕೋಲ್ ಗೇಟ್ ಪೇಸ್ಟ್ ಎಂದುಕೊಂಡು ಇಲಿ ಪಾಶಾಣ ಹಚ್ಚಿಕೊಂಡು ಹಲ್ಲು ತಿಕ್ಕಿದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಇಲ್ಲಿಯ ಅಲ್ತಾಫ್ ನಗರದಲ್ಲಿ ಮಂಗಳವಾರ ನಡೆದಿದೆ.
ಹಜರತ್‌ಅಲಿ ಮೆಹಬೂಬಸಾಬ ಅಂಗಡಿ (34) ಮೃತ ವ್ಯಕ್ತಿ.
ಈತ ಬೆಳಗ್ಗೆ ಬಾತ್‌ರೂಮ್‌ನಲ್ಲಿ ಇಟ್ಟಿದ್ದ ಇಲಿ ಪಾಶಣ ತೆಗೆದುಕೊಂಡು ಕೋಲ್ ಗೇಟ್ ಪೆಸ್ಟ್ ಎಂದುಕೊಂಡು ಹಲ್ಲು ತಿಕ್ಕಿದ್ದಾನೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಆತನನ್ನು ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net